ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಶಾಂತಿನಗರ ಶಾಲೆಗೆ ಕಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ

0

ನೆಲ್ಯಾಡಿ: ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ 2023-24ನೇ ಸಾಲಿನ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅತಿಥೇಯ ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆ ಒಟ್ಟು 15 ಪ್ರಶಸ್ತಿಗಳನ್ನು ಪಡೆದುಕೊಂಡು ಕ್ಲಸ್ಟರ್‌ನಲ್ಲಿ ಅತೀ ಹೆಚ್ಚು ಬಹುಮಾನ ಪಡೆದ ಶಾಲೆಯಾಗಿ ಹೊರಹೊಮ್ಮಿದೆ.

  • ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತೃತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಶಾಲೆಯ 7 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
  • ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೌಲ್ಯ ಅಭಿನಯ ಗೀತೆಯಲ್ಲಿ ಪ್ರಥಮ, ಯಶ್ಮಿತ್ ಚಿತ್ರಕಲೆ ಪ್ರಥಮ, ಸಾತ್ವಿಕ್ ಛದ್ಮವೇಷ ಪ್ರಥಮ, ಮಹಮ್ಮದ್ ಮರ್‌ಝೂಕ್ ಅರೇಬಿಕ್ ಧಾರ್ಮಿಕ ಪಠಣ ಪ್ರಥಮ, ಮಾನ್ಯ ಪಿ.ಭಕ್ತಿಗೀತೆಯಲ್ಲಿ ದ್ವಿತೀಯ ಹಾಗೂ ಲಘು ಸಂಗೀತದಲ್ಲಿ ತೃತೀಯ, ಯಶಸ್ವಿ ಕೆ., ಕಥೆ ಹೇಳುವುದರಲ್ಲಿ ಮತ್ತು ಇಂಗ್ಲಿಷ್ ಕಂಠಪಾಠದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
  • ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿಧಿ ಬಿ.ಚಿತ್ರಕಲೆ ಪ್ರಥಮ, ಮನೀಷ್ ಆಶುಭಾಷಣ ಪ್ರಥಮ, ರಕ್ಷಿತ್ ಕ್ಲೇಮಾಡಲಿಂಗ್‌ನಲ್ಲಿ ಪ್ರಥಮ, ಧೃತಿ ಕನ್ನಡ ಕಂಠಪಾಠ ದ್ವಿತೀಯ, ದೀಕ್ಷಾ ಛದ್ಮವೇಷ ದ್ವಿತೀಯ, ಮಾನ್ವಿ ಅಭಿನಯ ಗೀತೆ ದ್ವಿತೀಯ ಹಾಗೂ ಮಹಮ್ಮದ್ ಝಾಹೀದ್ ಅರೇಬಿಕ್ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಶಿಕ್ಷಕ ವೃಂದದವರು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here