ಕುಂಬ್ರದ ಅತಿಥಿ ಇಲೆಕ್ಟ್ರಾನಿಕ್ಸ್ ಬುಕ್ಕ ಫರ್ನಿಚರ‍್ಸ್ ಶೋರೂಮ್‌ಡ್ ಪರ್ಬೊದ ಭಾರೀ ಸೇಲ್

0

ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ * ಭಾರೀ ರಿಯಾಯಿತಿ * ವಿನ್ ಆಂಡ್ ಸ್ಪಿನ್ * ಕ್ಯಾಶ್‌ಬ್ಯಾಕ್

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ಈ ವರ್ಷದ ದೀಪಾವಳಿ ಹಬ್ಬದ ಬಿಗ್ ಸೇಲ್ ನಡೆಯುತ್ತಿದೆ. ಕಳೆದ 9 ವರ್ಷಗಳಿಂದ ಸೇಲ್ಸ್ ಮತ್ತು ಸರ್ವೀಸ್‌ನಲ್ಲಿ ತನ್ನದೇ ಶೈಲಿಯ ಕಾರ್ಯನಿರ್ವಹಣೆಗೆ ಪ್ರತಿ ಮನೆಯ ಸದಸ್ಯರ ಮನದಲ್ಲಿ ಅಚ್ಚಾಗಿರುವ ಅತಿಥಿಯು ಪ್ರತಿವರ್ಷದಂತೆ ಈ ವರ್ಷವೂ ತನ್ನೆಲ್ಲಾ ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳ ಖರೀದಿ ಮೇಲೆ ಇನ್ನೆಲ್ಲೂ ಸಿಗದ ಭಾರೀ ರಿಯಾಯಿತಿಯೊಂದಿಗೆ ಆಕರ್ಷಕ ಉಡುಗೊರೆ, ಬಹುಮಾನಗಳ ಸುರಿಮಳೆಯನ್ನೇ ನೀಡಿದ್ದು ಗ್ರಾಹಕರ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.
ಸೋನಿ, ಎಲ್‌ಜಿ, ಸ್ಯಾಮ್‌ಸಂಗ್, ಲಿಬೆರ್, ವಿರ್ಫೂಲ್ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಐಟಂಗಳು, ಗುಣಮಟ್ಟದ ಫರ್ನಿಚರ‍್ಸ್‌ಗಳಿರುವ ಗ್ರಾಮೀಣ ಭಾಗದ ಅತ್ಯಂತ ದೊಡ್ಡ ಶೋರೂಮ್ ಇದಾಗಿದ್ದು ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಸಿಬ್ಬಂದಿಗಳ ನಗುಮೊಗದ ಸೇವೆ, ವಸ್ತುಗಳ ಉಚಿತ ಸಾಗಾಟ, ಖರೀದಿ ಬಳಿಕವೂ ತೃಪ್ತಿದಾಯಕ ಸೇವೆ ಇತ್ಯಾದಿಗಳ ಮೂಲಕ ಅತಿಥಿ ಎಲ್ಲರ ಮನೆ ಮಾತಾಗಿರುವ ಅತಿಥಿ ಹತ್ತೂರಲ್ಲೂ ಗ್ರಾಹಕ ಬಳಗವನ್ನು ಹೊಂದಿದೆ. ಈ ವರ್ಷದ ದೀಪಾವಳಿಗೆ ಮತ್ತಷ್ಟು ಆಫರ್‌ಗಳನ್ನು ನೀಡಿದೆ. ನೀವು ಇನ್ನೂ ಅತಿಥಿಗೆ ಬಂದಿಲ್ಲವೇ ಹಾಗಾದರೆ ತಡ ಯಾಕೆ ಇಂದೇ ಭೇಟಿ ಕೊಡಿ ನಿಮ್ಮಿಷ್ಟದ ಅತಿಥಿಯನ್ನು ಮನೆಗೊಯ್ಯಿರಿ…



ಭಾರೀ ರಿಯಾಯಿತಿ
ಪ್ರತಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ಗಳ ಮೇಲೆ ಶೇ.10ರಿಂದ 50ರ ತನಕ ಭಾರೀ ರಿಯಾಯಿತಿ ಘೋಷಿಸಲಾಗಿದೆ. ಫರ್ನಿಚರ‍್ಸ್‌ನ ಬಾಳ್ವಿಕೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಫರ್ನಿಚರ‍್ಸ್‌ಗಳನ್ನು ಅತಿಥಿ ನೀಡುತ್ತಿದೆ. 2 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್‌ಗಳನ್ನು ನೀಡುತ್ತಿದ್ದು 2 ಸಾವಿರಕ್ಕೆ ಒಂದರಂತೆ ಲಕ್ಕಿ ಕೂಪನ್‌ಗಳನ್ನು ಪಡೆಯಬಹುದಾಗಿದ್ದು ಇದರಲ್ಲಿ ಟಿವಿ, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿ, ವಾರ್ಡ್‌ರೂಬ್ ಬಹುಮಾನಗಳಿವೆ. ಇದರ ಡ್ರಾ ಕೂಡ ಅತಿಥಿ ಶೋರೂಮ್‌ನಲ್ಲೇ ನಡೆಯಲಿದೆ. ಬಿಗ್ ಎಕ್ಸ್‌ಚೇಂಜ್ ಆಫರ್ ಇದ್ದು ಟಿವಿ, ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಷಿನ್‌ಗಳನ್ನು ಆಕರ್ಷಕ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಹೊಸತರೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ಟಿವಿಗಳಿಗೆ ೩ ವರ್ಷಗಳ ವಾರಂಟಿ ಕೂಡ ಇದೆ.


ಮೊಬೈಲ್‌ಗಳ ಮೇಲೆ ರೂ.6 ಸಾವಿರ ತನಕ ರಿಯಾಯಿತಿ
ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಬಿಗ್ ಆಫರ್ ನೀಡಿದ್ದು ಆಪಲ್ ಐಫೋನ್, ವಿವೋ, ಸ್ಯಾಮ್‌ಸಂಗ್,ಒಪ್ಪೋ, ರಿಯಲ್‌ಮಿ, ನೊಕಿಯೋ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಗಳ ಮೊಬೈಲ್ ಫೋನ್ ಖರೀದಿ ಮೇಲೆ 6 ಸಾವಿರ ರೂ.ತನಕ ರಿಯಾಯಿತಿ ಪಡೆಯಬಹುದಾಗಿದೆ. ಸ್ಪಿನ್ ಆಂಡ್ ವಿನ್ ಮೂಲಕ ಬಹುಮಾನ, ಐಫೋನ್ ಖರೀದಿದಾರರಿಗೆ 2 ವರ್ಷಗಳ ಅವಧಿಯ ಇಎಂಐ ಸೌಲಭ್ಯ ಎಲ್ಲವೂ ಇಲ್ಲಿದೆ.

ಫರ್ನಿಚರ‍್ಸ್ ಮೇಲೆ ಶೇ.50ರ ತನಕ ರಿಯಾಯಿತಿ
ಮನೆಗೆ ಬೇಕಾದ ಸೋಫಾ, ದಿವಾನ, ಕಾರ್ನರ್ ಸೋಫಾ, ಡೈನಿಂಗ್ ಟೇಬಲ್ ಏನೇನು ಬೇಕು ಅವೆಲ್ಲವೂ ಇಲ್ಲಿದೆ. ಗುಣಮಟ್ಟಕ್ಕೆ ಪ್ರಥಮ ಆದ್ಯತೆ ಇದ್ದು ಬೆಲೆಯಲ್ಲಿ ಮಾತ್ರ ಎಲ್ಲಿಯೂ ಸಿಗದ ಅತೀ ಕಡಿಮೆ ಬೆಲೆ ಇಲ್ಲಿದೆ. ಎಲ್‌ಜಿ, ಸೋನಿ, ವಿರ್ಫೂಲ್, ಸ್ಯಾಮ್‌ಸಂಗ್, ಲಿಬೆರ್, ಆಪಲ್ ನಂತಹ ಬ್ರ್ಯಾಂಡೆಡ್ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಐಟಮ್‌ಗಳ ಬೃಹತ್ ಸಂಗ್ರಹ ಅತಿಥಿಯಲ್ಲಿದೆ. ಜನ ಏನನ್ನು ಬಯಸುತ್ತಾರೋ ಅದಕ್ಕೆ ತಕ್ಕಂತೆ ಅತಿಥಿ ಅವರ ಬಯಕೆಗಳನ್ನು ಪೂರೈಸಲು ಸದಾ ಸಿದ್ಧವಿದೆ.

ಸ್ಥಳದಲ್ಲೇ ಸಾಲ ಸೌಲಭ್ಯ
ವಿವಿಧ ಫೈನಾನ್ಸ್ ಕಂಪೆನಿಗಳ ಮೂಲಕ ಅತೀ ಕಡಿಮೆ ದಾಖಲೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಶೂನ್ಯ ಮುಂಗಡ ಪಾವತಿಯ ಮೂಲಕವೂ ನಿಮ್ಮಿಷ್ಠದ ಐಟಮ್‌ಗಳನ್ನು ಖರೀದಿಸಬಹುದಾಗಿದೆ.

ಸಂದರ್ಶಿಸಿ, ಕರೆ ಮಾಡಿ
ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್, ಅಕ್ಷಯ ಆರ್ಕೇಡ್ ಕುಂಬ್ರ, ಒಳಮೊಗ್ರು ಗ್ರಾಮ, ಪುತ್ತೂರು.9590550111

ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ
ದೀಪಾವಳಿ ಪ್ರಯುಕ್ತ ನಡೆಯುತ್ತಿರುವ ಬಿಗ್ ಆಫರ್ ಸೇಲ್‌ಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುತ್ತೂರು, ಸುಳ್ಯ, ಬೆಳ್ಳಾರೆ ಸೇರಿದಂತೆ ಹಲವು ಕಡೆಗಳಿಂದ ಗ್ರಾಹಕರು ಅತಿಥಿಗೆ ಬಂದು ತಮ್ಮಿಷ್ಟದ ಐಟಮ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಇನ್ನೂ ಒಂದು ವಾರ ಕಾಲ ಆಫರ್ ಮುಂದುವರಿಯಲಿದೆ.

ನಮ್ಮೂರುದ ಶಾಪ್
ಅತಿಥಿ ನಮ್ಮೂರಿನ ಶಾಫ್ ಎಂದು ಹೇಳಲು ಖುಷಿಯಾಗುತ್ತದೆ. ಪೇಟೆಯ ಶೋರೂಮ್‌ಗಳಿಗೆ ಸರಿ ಸಮಾನವಾದ ಬೃಹತ್ ಶೋರೂಮ್ ಇದಾಗಿದೆ. ನಗುಮೊಗದ ಸೇವೆ ಮತ್ತು ಖರೀದಿ ಬಳಿಕವೂ ದೊರೆಯುವ ತೃಪ್ತಿದಾಯಕ ಸರ್ವೀಸ್ ಇಲ್ಲಿನ ಪ್ಲಸ್ ಪಾಯಿಂಟ್ ಆಗಿದೆ. ನಾನೂ ಅತಿಥಿಗೆ ಹೋಗ್ತಾ ಇದ್ದೇನೆ ನೀವು ಬನ್ನಿ…
ರತನ್ ರೈ ಕುಂಬ್ರ,
ಗ್ರಾಹಕರು, ಮಾಜಿ ಅಧ್ಯಕ್ಷರು ಕೆದಂಬಾಡಿ ಗ್ರಾಪಂ


ದಿ ಬೆಸ್ಟ್ ಶೋರೂಮ್
ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್ ಐಟಮ್‌ಗಳ ಖರೀದಿಗೆ ದಿ ಬೆಸ್ಟ್ ಶೋರೂಮ್ ಇದಾಗಿದೆ. ಕೈಗೆಟಕುವ ಬೆಲೆ ಮತ್ತು ಗುಣಮಟ್ಟದ, ಬ್ರ್ಯಾಂಡೆಡ್ ಐಟಮ್‌ಗಳ ಬೃಹತ್ ಶೋರೂಮ್. ದೀಪವಾಳಿಗೆ ಭರ್ಜರಿ ಆಫರ್ ನಡೆಯುತ್ತಿದ್ದು ಒಳ್ಳೆಯ ಸೇವೆ ಅತಿಥಿಯಲ್ಲಿ ಸಿಗುತ್ತಿದೆ.
ತ್ರಿವೇಣಿ ಪಲ್ಲತ್ತಾರು,
ಗ್ರಾಹಕರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here