ನೆಲ್ಯಾಡಿ: ಸ್ಕೂಟಿ,ರಿಕ್ಷಾ ಡಿಕ್ಕಿ-ಮಹಿಳೆಗೆ ಗಾಯ

0

ನೆಲ್ಯಾಡಿ: ಸ್ಕೂಟಿ ಹಾಗೂ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರೆ ಗಾಯಗೊಂಡಿರುವ ಘಟನೆ ನ.18ರಂದು ಬೆಳಿಗ್ಗೆ ನೆಲ್ಯಾಡಿ ಪೇಟೆಯಲ್ಲಿ ನಡೆದಿದೆ.ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆಯಲ್ಲಿ ಜಾನ್ಸನ್ ಎಂಬವರ ವೆಲ್ಡಿಂಗ್ ಅಂಗಡಿಯ ಬಳಿ ಶ್ರೀಮತಿ ಪ್ರಮೋದಾ ಎಂಬವರು ಚಲಾಯಿಸುತ್ತಿದ್ದ ಸ್ಕೂಟಿ( ಕೆಎ41, ಡಬ್ಲ್ಯು 4398)ಗೆ ಆಟೋರಿಕ್ಷಾ (ಕೆಎ21 ಸಿ 4358) ಡಿಕ್ಕಿಯಾಗಿದೆ.

ಘಟನೆಯಲ್ಲಿ ಪ್ರಮೋದಾರವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಆಲಂತಾಯ ನಿವಾಸಿ ಸುಜಿತ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 160/2023 ಕಲಂ: ಕಲಂ:279,337 ಐಪಿಸಿ ಮತ್ತು ಕಲಂ:218 ಜೊತೆಗೆ 177 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here