ಬಡಗನ್ನೂರು ವಿಶೇಷ ಗ್ರಾಮ ಸಭೆ

0

ಬಡಗನ್ನೂರುಃ ಬಡಗನ್ನೂರು ಗ್ರಾ ಪಂ ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆ 2023-24ನೇ ಸಾಲಿನ ಗ್ರಾ. ಪಂ ನ ಪ್ರಥಮ ಮತ್ತು ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ನ.20 ರಂದು  ಗ್ರಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಪುಷ್ಷಲತಾ ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್‌ ಲೆಕ್ಕ ಪತ್ರಗಳ ದಾಖಲೆ ಮತ್ತು 2023-2024ನೇ ವರ್ಷ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ಮಾಡಲಾಯಿತು. ನೋಡೆಲ್ ಅಧಿಕಾರಿಯಾಗಿ ಪುತ್ತೂರು ಸಮಾಜ ಕಲ್ಯಾಣ ಇಲಾಖೆ  ಗ್ರೇಡ್-2) . ಸಹಾಯಕ ನಿರ್ದೇಶಕ  ಕೃಷ್ಣ  ಬಿ ಮಾತನಾಡಿ, ಪಾರದರ್ಶಕ ಅಡಳಿತ ವಿಸ್ತೃತ ರೂಪ,  ಗ್ರಾ.ಪಂ  ಸದಸ್ಯರ  ಮತ್ತು ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ನರೆಗಾ ಯೋಜನೆಯಲ್ಲಿ ಅದ್ಭುತ ಸಾಧನೆ ಮಾಡಿದೆ , ಪಂಚಾಯತ್ ಲೆಕ್ಕಪತ್ರ ಕಡತ ಉತ್ತಮ ನಿರ್ವಹಣೆಯಾಗಿದೆ.ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಆಗಲಿ ಎಂದು ಹೇಳಿದರು.ನರೇಗಾ ತಾಲೂಕು ಸಂಯೋಜಕ ಭರತ್ ರಾಜ್ ನರೇಗಾ ಯೋಜನೆ  ಬಗ್ಗೆ ಸಮಗ್ರ  ಮಾಹಿತಿ  ನೀಡಿದರು.

ಸಾಮಾಜಿಕ ಲೆಕ್ಕ ಪರಿಶೋಧನಾ ತಾಲೂಕು ಸಂಯೋಜಕ ಪ್ರವೀಣ್ ಕುಮಾರ್ ಮಾತನಾಡಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಬಗ್ಗೆ  ಮಾಹಿತಿ ನೀಡಿ ಮಾತನಾಡಿ  ಪಾರದರ್ಶಕತೆ ಮತ್ತು ಉತ್ತರದಾಯಕತ್ವ ನಿಟ್ಟಿನಲ್ಲಿ 14ನೇ ಮತ್ತು 15 ಹಣಕಾಸು ಯೋಜನೆಯಡಿ ಹಂಚಿಕೊಳ್ಳಲಾದ  ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ವಹಿಸಿದ ಕಾಮಗಾರಿ ಬಗ್ಗೆ ಬಾಹ್ಯ ಹಾಗೂ ಅಂತರಿಕ ಲೆಕ್ಕ ಪರಿಶೋಧನೆ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಖರ್ಚು ಆಗಿದೆ ಎಂದ ಅವರು ಯಾವುದೇ ಕಾಮಗಾರಿ ನಡೆದ ಸಂದರ್ಭದಲ್ಲಿ ಕಾಮಗಾರಿ ಸಮಗ್ರ ಮಾಹಿತಿ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ . ಗ್ರಾಮದ ಅಭಿವೃದ್ಧಿಯಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ  ಸಾರ್ವಜನಿಕ ಕಾಮಗಾರಿ ಪರಿಶೀಲನೆ ಮಾಡುವ ಜವಾಬ್ದಾರಿ ಇದೆ ಆಗ ಮಾತ್ರ ಯಾವುದೇ ಕಾಮಗಾರಿ ಗುಣಮಟ್ಟ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ   ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯರಾದ  ಶ್ರೀಮತಿ ಕನ್ನಡ್ಕ, ಸಂತೋಷ್ ಆಳ್ವ, ರವಿರಾಜ ರೈ ಸಜಂಕಾಡಿ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ರವಿಚಂದ್ರ ಸಾರೆಪ್ಪಾಡಿ,  ಹೇಮಾವತಿ ಮೋಡಿಕೆ, ಜ್ಯೋತಿ ಅಂಬಟೆಮೂಲೆ ಹಾಗೂ ಉದ್ಯೋಗ ಖಾತರಿ ಫಲಾನುಭವಿಗಳು, ಸಾಮಾಜಿಕ ಲೆಕ್ಕ ಪರಿಶೋಧನಾ ತಂಡದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ,ವಂದಿಸಿದರು.ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here