ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನ ಕೆಳಮಹಡಿಯಲ್ಲಿ ಕಳೆದ ಕೆಲವರುಷಗಳಿಂದ ವ್ಯವಹರಿಸುತ್ತಿದ್ದ ಪ್ರಸಿದ್ಧ ಬ್ರ್ಯಾಂಡ್ ಗಳ ವಿನೂತನ ಶೈಲಿಯ ಪುರುಷರ ಸಿದ್ದ ಉಡುಪುಗಳ ಮಳಿಗೆ ‘ಮೈ ಡ್ರೆಸ್ ಕೋಡ್’ ಇದರ ಅಂಗ ಸಂಸ್ಥೆ ರೆಡಿಮೆಡ್ & ಫ್ಯಾಬ್ರಿಕ್ ಬಟ್ಟೆಗಳ ಮಳಿಗೆ
‘ಮೈ ಡ್ರೆಸ್ ಕೋಡ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ ನ.24ರಂದು ಪಕ್ಕದ ಕೋಣೆಯಲ್ಲಿ ಆರಂಭಗೊಳ್ಳಲಿದೆ.
ಕಳೆದ ಆರು ವರುಷಗಳ ಹಿಂದೆ ಪುತ್ತೂರಿನಲ್ಲಿ ಆರಂಭವಾದ ‘ಮೈ ಡ್ರೆಸ್ ಕೋಡ್’ ವಿವಿಧ ಬ್ರ್ಯಾಂಡ್ ಗಳ ಪುರುಷರ ಬಟ್ಟೆಗಳನ್ನು ಮಾರಾಟ ಮಾಡುತ್ತಾ, ವಸ್ತ್ರ ಪ್ರಿಯರ ನೆಚ್ಚಿನ ಸಂಸ್ಥೆಗಳಲ್ಲಿ ಒಂದಾಯಿತು. ಸಂಸ್ಥೆ ಬೆಳೆಯುತ್ತಾ ಬಂದು ಪುತ್ತೂರಿನ ಪುರುಷರ ಬಟ್ಟೆಗಳ ಬೃಹತ್ ಮಳಿಗೆ ಎನ್ನುವ ಪ್ರಶಂಸೆಗೆ ಪಾತ್ರವಾಯಿತು. ಇದೀಗ ಗ್ರಾಹಕರಿಗೆ ಮತ್ತಷ್ಟು ಸೇವೆ ನೀಡಬೇಕೆನ್ನುವ ಇಚ್ಚೆಯಿಂದ ಫ್ಯಾಬ್ರಿಕ್ ಬಟ್ಟೆಗಳ ಬೃಹತ್ ಮಳಿಗೆ ‘ಮೈ ಡ್ರೆಸ್ ಕೋಡ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ವನ್ನು ಆರಂಭಿಸಲು ಸಂಸ್ಥೆ ಮುಂದಡಿ ಇಟ್ಟಿದೆ.
ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ದಲ್ಲಿ ಏನಿದೆ…?
‘ಮೈ ಡ್ರೆಸ್ ಕೋಡ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ದಲ್ಲಿ ಎಲ್ಲಾ ಪ್ರಸಿದ್ಧ ಬ್ರ್ಯಾಂಡ್ ಗಳ ಫ್ಯಾಬ್ರಿಕ್ ಬಟ್ಟೆಗಳು ಲಭ್ಯವಿದ್ದು, ತಮ್ಮಿಷ್ಟದ ಬಟ್ಟೆಗಳನ್ನು ಒಂದು ದಿನದಲ್ಲಿ ಹೊಲಿದುಕೊಡುವ ವ್ಯವಸ್ಥೆಯು ಸಂಸ್ಥೆಯಲ್ಲಿದೆ.
ಮದುವೆ, ಮನೆ ಗೃಹಪ್ರವೇಶಗಳ ಸಹಿತ ಎಲ್ಲಾ ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ಡ್ರೆಸ್ ಕೋಡಿಂಗ್ ಗಳನ್ನು ಸಂಸ್ಥೆ ಕ್ಲಪ್ತ ಸಮಯದಲ್ಲಿ ಒದಗಿಸುವ ನಿಟ್ಟಿನಲ್ಲಿಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಪ್ಯಾಂಟ್, ಶರ್ಟ್, ಕುರ್ತಾ ಪೈಜಾಮ(ಕುರ್ತಸೆಟ್) ಜೋದ್ ಪುರಿ, ಶೆರ್ವಾನಿ, ಮೋದಿಕೋಟ್ ಗಳು ಸಹಿತ ಎಲ್ಲಾ ರೀತಿಯ ಪುರುಷರ ಮದುವೆ ಬಟ್ಟೆಗಳನ್ನು ಸ್ಟಿಚಿಂಗ್ ಮಾಡಿಕೊಡುವ ಹಾಗೂ ಎಲ್ಲಾ ರೀತಿಯ ಪುರುಷರ ಮ್ಯಾಚಿಂಗ್ ಡ್ರೆಸ್ ಗಳು ಲಭ್ಯವಿದೆ. ರೈಮಂಡ್, ಸಿಯಾರಾಮ್ಸ್, ಮಿತ್ವ ಲೋಯಲ್, ಅರವಿಂದ್, ಕ್ರಿಪ್ಲಾನ್, ಲೆಗಾಝಿಯಾ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳ ಬಟ್ಟೆಗಳು ಲಭ್ಯವಿದೆ.
ರೆಡಿಮೆಡ್ & ಫ್ಯಾಬ್ರಿಕ್ ಬಟ್ಟೆಗಳ ಮಳಿಗೆ
ಕಳೆದ ಆರು ವರುಷಗಳ ಹಿಂದೆ ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಆಶಿರ್ವಾದದೊಂದಿಗೆ ಪುತ್ತೂರಿನಲ್ಲಿ ‘ಮೈ ಡ್ರೆಸ್ ಕೋಡ್’ ಎನ್ನುವ ಪುರುಷರ ಸಿದ್ಧ ಉಡುಪುಗಳ ಮಳಿಗೆಯನ್ನು ಆರಂಭಿಸಿದೆವು. ಆರಂಭದ ದಿನಗಳಿಂದಲೂ ಈ ಭಾಗದ ಜನರಿಂದ ನಮಗೆ ಉತ್ತಮ ಪ್ರತಿಕ್ರೀಯೆ ಲಭ್ಯವಾಗಿದೆ. ನಮ್ಮ ಗ್ರಾಹಕರಿಗೆ ಮತ್ತಷ್ಟು ಸೇವೆ ನೀಡಬೇಕೆನ್ನುವ ನಿಟ್ಟಿನಲ್ಲಿ
ರೆಡಿಮೆಡ್ & ಫ್ಯಾಬ್ರಿಕ್ ಬಟ್ಟೆಗಳ ಮಳಿಗೆ ‘ಮೈ ಡ್ರೆಸ್ ಕೋಡ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ವನ್ನು ಆರಂಭಿಸಲಿದ್ದೇವೆ. ಈವರೆಗೆ ಗ್ರಾಹಕರು ನೀಡಿದ ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.