





ಪುತ್ತೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೊರಗಪ್ಪ ಹಾಲ್ನಲ್ಲಿ ನ.26ರಂದು ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಂಧೀಪನಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅಭೀಷ್ ರೈ ಮಂದಾರರವರು ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಕರಾಟೆ ಶಿಕ್ಷಕ ನಾರಾಯಣ ಕಾವುರವರಿಂದ ತರಬೇತಿ ಪಡೆಯುತ್ತಿದ್ದಾರೆ. ಅಭೀಷ್ ರೈಯವರು ಈಗಾಗಲೇ ಅಂಬರ ಮರ್ಲೆರ್ ತುಳು ಹಾಸ್ಯ ಧಾರಾವಾಹಿ ಸೇರಿದಂತೆ ಪನೊಡ ಬೋಡ್ಚಾ, ಬಾಬಣ್ಣ ಬೂಬಣ್ಣ ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಮತ್ತು ಮಲ್ಲಿಕಾ ರೈ ಮಂದಾರರವರ ಪುತ್ರರಾಗಿದ್ದಾರೆ.











