ಪುತ್ತೂರು: ಭಾರತ ಸರಕಾರ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಕಮಿಷನರ್ ಕಚೇರಿ (ಎಂ.ಎಸ್.ಎಂ.ಇ)ಯ ಮಂಗಳೂರಿನಲ್ಲಿರುವ ಎಂ.ಎಸ್.ಎಂ.ಇ. ಡೆವಲಪ್ಮೆಂಟ್ ಮತ್ತು ಫೆಸಿಲಿಟೇಶನ್ ಆಫೀಸ್ ಶಾಖೆ ಹಾಗೂ ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ರಿ.), ಪುತ್ತೂರು ಮತ್ತು ಪುತ್ತೂರು ಇಂಡಸ್ಟ್ರೀಸ್ ಅಸೋಸಿಯೇಶನ್ (ರಿ.), ಪುತ್ತೂರು ಇವುಗಳ ಸಹಯೋಗದಲ್ಲಿ ‘ಉದ್ದಿಮೆದಾರರ ಜಾಗೃತಿ ಕಾರ್ಯಕ್ರಮ’ (ಎಂಟರ್ ಪ್ರೆನ್ಯೂರ್ ಶಿಪ್ ಅವಾರ್ನೆಸ್ ಪ್ರೋಗ್ರಾಮ್)ನ್ನು ನ.29ರ ಬುಧವಾರದಂದು ಮುಕ್ರಂಪಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಪುತ್ತೂರು ಇಂಡಸ್ಟ್ರಿಯಲ್ ಅಸೋಸಿಯೇಶನ್ ಕಟ್ಟಡದಲ್ಲಿ ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ.
ಈ ಅರಿವು ಕಾರ್ಯಕ್ರಮದಲ್ಲಿ ಪುತ್ತೂರು ಭಾಗದ ಯುವ ಉದ್ದಿಮೆದಾರರಿಗೆ ಮತ್ತು ಸ್ಟಾರ್ಟ್ ಅಪ್ ಪ್ರಾರಂಭಿಸುವ ಉತ್ಸಾಹಿ ಯುವ ಉದ್ಯಮಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಕಡೆಯಿಂದ ಲಭ್ಯವಿರುವ ಸೌಲಭ್ಯಗಳು ಮತ್ತು ಬ್ಯಾಂಕ್ ನಿಂದ ಸಿಗುವ ಸವಲತ್ತುಗಳ ಕುರಿತಾಗಿ ಎಂ.ಎಸ್.ಎಂ.ಇ. ಡೆವಲ್ಮೆಂಟ್ ಇನ್ಸ್ಟಿಟ್ಯೂಟ್ ನ ಮಂಗಳೂರು ಶಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಶೃತಿ ಜಿ.ಕೆ ಅವರು ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಿದ್ದಾರೆ. ಮಾತ್ರವಲ್ಲದೇ ಯಶಸ್ವಿ ಉದ್ಯಮಿ ‘ನಿತ್ಯ ಚಪಾತಿ’ಯ ರಾಧಾಕೃಷ್ಣ ಅವರಿಂದ ಮೋಟಿವೇಶನಲ್ ಸ್ಪೀಚ್ ಸೆಷನ್ ಸಹ ನಿಗದಿಪಡಿಸಲಾಗಿದೆ.
ಈ ಕಾರ್ಯಕ್ರಮ ಸಂಪೂರ್ಣವಾಗಿ ಉಚಿತವಾಗಿದ್ದು, ಈ ಭಾಗದ ಆಸಕ್ತರು ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜವನ್ನು ಪಡೆದುಕೊಳ್ಳುವಂತೆ ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.