ಪುತ್ತೂರು: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಎಚ್ ಐ ವಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ “ಮಹೇಶ್ ಫೌಂಡೇಶನ್” ಎಂಬ ಸಂಸ್ಥೆಯ ಮೂಲಕ ಎಚ್ ಐ ವಿ ಸೋಂಕಿತ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಬೆಳಗಾವಿಯ ರಾಷ್ಟ ಪ್ರಶಸ್ತಿ ಪುರಷ್ಕೃತ ಮಹೇಶ್ ಜಾಧವ್ ಅವರ ಅನುಭವ ಕಥನವನ್ನು ವೀಕ್ಷಿಸಿ ಚರ್ಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಸಂಯೋಜಕ ಡಾ.ಸೀತಾರಾಮ ಪಿ ಮಾತನಾಡಿ ಎಚ್ ಐ ವಿ ಬಗ್ಗೆ ಈ ಮುಂಚೆ ಇದ್ದ ಭಯ ಆತಂಕಗಳಿಗಿಂತಲೂ ಆ ಕಾಯಿಲೆಯ ಬಗ್ಗೆ ಜಾಗೃತಿ ಹೊಂದುವುದು ತುಂಬಾ ಮಹತ್ವದ್ದು. ಮಹೇಶ್ ಜಾಧವ್ ಅವರ ಅನುಭವ ಕಥನವನ್ನು ವೀಕ್ಷಿಸುವ ಮೂಲಕ ಎಲ್ಲರಲ್ಲಿಯೂ ಅರಿವು ಹೆಚ್ಚಾಗಿ ಏಡ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಶ್ರುತಿ ಹಾಗೂ ಚಂದ್ರಕಲಾ ಬಿ , ಬೋಧಕ ಬೋಧಕೇತರ ಸಿಬ್ಬಂದಿ,ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂಸೇವಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ನೂರಂದಪ್ಪ ಸ್ವಾಗತಿಸಿದರು.