ಡಿ.16: ರಾಮಕುಂಜದಲ್ಲಿ ’ಮಲ್ಲ ಸಂಗತಿಯೇ ಅತ್ತ್’ ತುಳು ನಾಟಕ

0

ರಾಮಕುಂಜ; ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಅಭಿನಯಿಸುವ ’ ಮಲ್ಲ ಸಂಗತಿಯೇ ಅತ್ತ್’ ತುಳು ಹಾಸ್ಯಮಯ ನಾಟಕ ಡಿ.16ರಂದು ಸಂಜೆ 4 ರಿಂದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಖ್ಯಾತ ತುಳು ರಂಗ ನಟ ರವಿ ರಾಮಕುಂಜ ಅವರು ಈ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here