ಪುತ್ತೂರು: ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದ ಚೆನೈನ ಅಣ್ಣಾ ವಿಶ್ವ ವಿದ್ಯಾನಿಲಯದ ಅತಿಥ್ಯದಲ್ಲಿ ನಡೆದ ಸೌತ್ ವೆಸ್ಟ್ ಜೋನ್ ವಲಯದ ಅಂತರ್ ವಿಶ್ವವಿದ್ಯಾಲಯಗಳ ಯೋಗಾಸನ ಚಾಂಪಿಯನ್‌ಶಿಫ್‌ನಲ್ಲಿ ಪುತ್ತೂರಿನ ಅಪೇಕ್ಷಾ ಕಾರ್ಲಾಡಿಮತ್ತು ಕೃಪಾ ಅಂಬುಲಪಾಲ್ಗೊಂಡು ಜಯಗಳಿಸುವ ಮೂಲಕ ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಗ ವಿದ್ಯಾಸಂಸ್ಥೆಯಲ್ಲಿ ತರಬೇತಿ ಪಡೆಯುತತಿದ್ದಾರೆ. . ಅಪೇಕ್ಷಾ ಕಾರ್ಲಾಡಿ ಮತ್ತು ಕೃಪಾ ಅಂಬುಲ ಪ್ರಸ್ತುತ ವೈದ್ಯಕೀಯ(ನ್ಯಾವುರೋಪತಿ ಮತ್ತು ಯೋಗ) ಪದವಿ ಅಧ್ಯಯನ ಮಾಡುತ್ತಿದ್ದು, ನೈರುತ್ಯ ವಲಯ ಚಾಂಪಿಯನ್‌ಶಿಫ್‌ನಲ್ಲಿ ತಂಡ ವಿಭಾಗದಲ್ಲಿ ಬೆಂಗಳೂರಿನ ರಾಜೀವ ಗಾಂಧಿ ಯೂನಿರ್ವಸಿಟಿ ಆಫ್ ಹೆಲ್ತ್ ಸೈನ್ಸ್‌ಸ್ ಅನ್ನು ಪ್ರತಿನಿಧಿಸಿ 132 ತಂಡಘಳ ಪೈಕಿ 4ನೇ ಸ್ಥಾನ ಪಡೆದಿದ್ದು, 1260 ಆಟಗಾರರಿದ್ದು ವೈಯುಕ್ತಿಕ ವಿಭಾಗದಲ್ಲಿ ಆಪೇಕ್ಷಾ ರವರು 9ನೇ ಸ್ಥಾನವನ್ನು ಪಡೆದಿದ್ದಾರೆ. ರಾಷ್ಟ್ರೀಯ ಸ್ಪರ್ಧೆಗಳು ದ. 25 ರಿಂದ 27ರ ತನಕ ಒಡಿಸ್ಸಾ ಭುವನೇಶ್ವರದಲ್ಲಿ ನಡೆಯಲಿದೆ. ಅಪೇಕ್ಷಾ ಕಾರ್ಲಾಡಿರವರು ಉಜಿರೆ ಎಸ್‌ಡಿಎಂ ಪ್ರಜೃತಿ ಚಿಕಿತ್ಸಾಲಯ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥೀನಿಯಾಗಿದ್ದು, ಪುತ್ತೂರಿನ ಅಂಕಲ್ ಸ್ವೀಟ್ಸ್‌ನ ಕುಶಾಲಪ್ಪ ಗೌಡ ಮತ್ತು ಪ್ರೇಮ ರವರ ಪುತ್ರಿ, ಕೃಪಾ ರವರು ಅಂಬುಲ ದಾಮೋದರ ಗೌಡ ಮತ್ತು ಹೇಮಲತಾ ದಂಪತಿ ಪುತ್ರಿ.