ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ಷಕ – ಶಿಕ್ಷಕ ಸಂಘದ ಪ್ರಥಮ ಮಹಾಸಭೆಯು ಡಿ.16ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ಆಡಳಿತಮಂಡಳಿಯವರೆಲ್ಲರ ಪಾತ್ರ ಮಹತ್ವವಾದದ್ದು ಎಂದರು.
ಅತಿಥಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿದ್ದ ಇಡಿ. ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ ಮುಂದಿನ ದಿನಗಳಲ್ಲಿ ತೆರಿಗೆಯನ್ನು ಪಾವತಿಸುವಂತಹ ಸಾಮರ್ಥ್ಯವನ್ನು ಪಡೆಯುವ ಸತ್ಪ್ರಜೆಗಳು ನಮ್ಮ ವಿದ್ಯಾರ್ಥಿಗಳಾಗಬೇಕೆಂದು ಎಂದರು. ಸಂಸ್ಥೆಯ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಎಚ್ ಮಹಮ್ಮದ್ ಉಪಸ್ಥಿತರಿದ್ದರು.ಪ್ರಥಮ ಹಾಗೂ ದ್ವಿತೀಯ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಲಾಯಿತು.2023-24 ನೇ ಶೈಕ್ಷಣಿಕ ವರ್ಷದ ಅಧ್ಯಕ್ಷರಾಗಿ ಪುಷ್ಪಾವತಿ ಹಾಗೂ ಉಪಾಧ್ಯಕ್ಷರಾಗಿ ವಿಜಯ್ ರವರು ಆಯ್ಕೆಯಾದರು. ಸದಸ್ಯರಾಗಿ ದೇವಕಿ, ಭಾರತಿ, ಶೀಲಾ, ಚಿನ್ನಮ್ಮ,ಪುಷ್ಪಾವತಿ, ರಮಣಿ ಹಾಗೂ ಹರಿಕೃಷ್ಣ ಭಟ್ ಆಯ್ಕೆಯಾದರು.
ಶೋಭಿತಾ, ಲಾವಣ್ಯ, ಅಭಿಜ್ಞಾ ಹಾಗೂ ಶ್ರಾವಣಿ ಪ್ರಾರ್ಥಿಸಿ, ತೃತೀಯ ಬಿ.ಕಾಂ ವಿದ್ಯಾರ್ಥಿ ರಾಜೇಶ್ ಸ್ವಾಗತಿಸಿ, ಅಭೀಜ್ಞಾ ದ್ವಿತೀಯ ಬಿ.ಕಾಂ ವಂದಿಸಿದರು. ತೃತೀಯ ಬಿ.ಎ ವಿದ್ಯಾರ್ಥಿ ಶಮೀರ್ ಕಾರ್ಯಕ್ರಮ ನಿರ್ವಹಿಸಿದರು.