ಕೊಳ್ತಿಗೆ ಸರಕಾರಿ ಶಾಲಾ ವಾರ್ಷಿಕೋತ್ಸವ, ಹಿರಿಯ ವಿದ್ಯಾರ್ಥಿ ಸಂಘದ ರಜತ ಸಂಭ್ರಮ

0

ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲೀಕರಣ ಸಾರ್ವತ್ರಿಕ ಸಮಸ್ಯೆ-ಚಂದ್ರಹಾಸ ರೈ

ಪುತ್ತೂರು: ಖಾಸಗಿ ವಿದ್ಯಾಸಂಸ್ಥೆಗಳ ಹಾವಳಿಯಿಂದಾಗಿ ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲೀಕರಣ ಸಾರ್ವತ್ರಿಕ ಸಮಸ್ಯೆಯಾಗಿದೆ. ಶಾಲೆಯಲ್ಲಿನ ವಾತಾವರಣ, ವ್ಯವಸ್ಥೆ, ಶಿಕ್ಷಣ ಇವುಗಳ ಬಗ್ಗೆ ಗಮನಹರಿಸಿದಾಗ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಬಹುದಾಗಿದೆ ಎಂದು ನಿವೃತ್ತ ಉಪನ್ಯಾಸಕ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ.ರವರು ಹೇಳಿದರು.


ಡಿ. ೧೬ರಂದು ನಡೆದ ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಜತ ಸಂಭ್ರಮ ಸಮಿತಿ, ಕೊಳ್ತಿಗೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ರಜತ ಸಂಭ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡುತ್ತಾ ಮಾತನಾಡಿದರು. ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಶಾಲೆಯನ್ನು ಹೇಗೆ ಉತ್ತುಂಗಕ್ಕೇರಿಸಬೇಕು, ಖಾಸಗಿ ಶಾಲೆಗಳಲ್ಲಿರುವ ವಿಶೇಷ ಚಟುವಟಿಕೆಗಳನ್ನು ಸರಕಾರಿ ಶಾಲೆಯಲ್ಲಿ ಅಳವಡಿಸಿ ಆಕರ್ಷಿಸಿಸುವ ಬಗ್ಗೆ ಆಲೋಚನಾಸಕ್ತರಾಗಬೇಕಿದೆ. ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳೇ ಇಂದು ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ನಮಗೆ ಕಾಣ ಸಿಗುತ್ತದೆ ಎಂದರು.


ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಸರಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸಿ-ಅಕ್ಕಮ್ಮ:
ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷೆ ಅಕ್ಕಮ್ಮರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ಬೇಸರದ ವಿಷಯ. ಖಾಸಗಿ ವಿದ್ಯಾಸಂಸ್ಥೆಯಲ್ಲಿ ಇರುವ ಸೌಕರ್ಯಗಳು ಇಂದು ಸರಕಾರಿ ಶಾಲೆಯಲ್ಲಿವೆ. ಸರಕಾರಿ ಶಾಲೆಯ ಸುತ್ತಮುತ್ತಲಿನ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಸರಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ ಎಂದರು.


ಮಕ್ಕಳಲ್ಲಿನ ಪ್ರತಿಭೆ, ಕೌಶಲ್ಯಗಳಿಗೆ ಪ್ರೋತ್ಸಾಹಿಸಿ-ಶ್ಯಾಮ್‌ಸುಂದರ್ ರೈ:
ಬೆಳಿಗ್ಗೆ ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮ್‌ಸುಂದರ್ ರೈ ಕೆರೆಮೂಲೆರವರು ಧ್ವಜಾರೋಹಣಗೈದು ಬಳಿಕ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ,ಪ್ರಕೃತಿಯಲ್ಲಿನ ಜೀವ ವೈವಿಧ್ಯ ಸೃಷ್ಟಿಯಲ್ಲಿ ಸುಂದರ ಹೂವುಗಳು ಹಾಗೂ ಪುಟಾಣಿ ಮಕ್ಕಳನ್ನು ನೋಡಿದಾಗ ಪ್ರೀತಿ ಉಕ್ಕಿ ಬರುತ್ತದೆ. ಮಕ್ಕಳಲ್ಲಿನ ಪ್ರತಿಭೆ ಹಾಗೂ ಕೌಶಲ್ಯಗಳಿಗೆ ನಾವು ಪ್ರೋತ್ಸಾಹಿಸಿ ಹುರಿದುಂಬಿಸಿದಾಗ ಆ ಮಗು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬಲ್ಲನು ಎಂದರು.


ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿಸಿ-ಕೊಳ್ತಿಗೆ ನಾರಾಯಣ ಗೌಡ:
ರಜತರತ್ನ ಸನ್ಮಾನ ಪುರಸ್ಕೃತ, ಯಕ್ಷಗಾನ ಕ್ಷೇತ್ರದ ಸಾಧಕ ಕೊಳ್ತಿಗೆ ನಾರಾಯಣ ಗೌಡರವರು ತಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡಿಡಬೇಡಿ, ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿಸಿ. ಮಕ್ಕಳಿಗೆ ಸಂಸ್ಕಾರಯುತ ವಿದ್ಯಾಭ್ಯಾಸ ಕಲಿಸಿ. ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ ಹಾಗೂ ಮಕ್ಕಳ ಮುಂದೆ ಧಾರಾವಾಹಿಗಳನ್ನು ನೋಡುವುದನ್ನು ಪೋಷಕರು ಕಡಿಮೆ ಮಾಡಬೇಕು. ಮಹಾತ್ಮ ಗಾಂಧಿ ಕಂಡಂತಹ ರಾಮರಾಜ್ಯ ನಮ್ಮದಾಗಲಿ. ಚುನಾವಣೆಗೆ ನಿಲ್ಲುವ ವ್ಯಕ್ತಿಗೆ ಇಂತಿಷ್ಟೇವಿದ್ಯಾಭ್ಯಾಸ ಹೊಂದಬೇಕು ಎನ್ನುವ ಮಾನದಂಡವನ್ನು ಸರಕಾರ ಜಾರಿಗೊಳಿಸಬೇಕು ಎಂದರು.


ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಅಭಿನಂದನೆ:
ಕಳೆದ 25 ವರ್ಷಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘದಲ್ಲಿ ಸೇವೆ ಸಲ್ಲಿಸಿದ ಅಮಲ ರಾಮಚಂದ್ರ, ಕೃಷ್ಣಪ್ಪ ಗೌಡ ಬಾಯಂಬಾಡಿ, ಚಿನ್ನಪ್ಪ ಗೌಡ ನೂಜಿ, ಕಿರಣ್ ಬಾಯಂಬಾಡಿ, ಭಾಸ್ಕರ್ ರೈ ಪುನರಡ್ಕ, ತಿಮ್ಮಪ್ಪ ಗೌಡ ಕೆಮ್ಮಾರ, ವಿನೋದ್ ಪಾಪುತ್ತಡ್ಕ, ಸತ್ತಾರ್ ಅಮಳ, ರತೀಶ್ ಕೆಮ್ಮಾರ, ಶಿವರಾಮ ಮಣ್ಣಾಪು, ಜಯತ್ ಕೆಮ್ಮಾರ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ರಮೇಶ್ ಭಟ್ ಅರಿಕ್ಕಿಲ, ಭರತ್ ಕೆಮ್ಮಾರ, ಸಿದ್ದೀಕ್ ಬಾಯಂಬಾಡಿ, ಬಾಲಚಂದ್ರ ಕೆಮ್ಮಾರ, ಯೋಗೀಶ್ ಬಾಯಂಬಾಡಿ, ಶಿವರಾಮ ಕೆಮ್ಮಾರ, ಪ್ರಶಾಂತ ಬಾಯಂಬಾಡಿ, ಶಾಹುಲ್ ಅಮಳ, ಪ್ರವೀಣ್ ಕೆಮ್ಮಾರ, ಕಿಶೋರ್ ಬಾಯಂಬಾಡಿ, ಅಶೋಕ್ ಅರಿಕ್ಕಿಲ, ಹರೀಶ್ ಅಮಳ, ವಿಜೇಶ್ ರೈ ಕೆಳಗಿನಮನೆರವರುಗಳನ್ನು ಅಭಿನಂದಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮ/ಬಹುಮಾನ ವಿತರಣೆ:
ವಾರ್ಷಿಕೋತ್ಸವದಲ್ಲಿ ಕೊಳ್ತಿಗೆ, ಬಾಯಂಬಾಡಿ, ಮೊಗಪ್ಪೆ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೊಳ್ತಿಗೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾಲಿತ್ತೋಡು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಅಲ್ಲದೆ ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳಿಗೆ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.


ಸಹಕಾರ:
ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಂತೋಷ್ ಬಾಯಂಬಾಡಿ, ಜೊತೆ ಕಾರ್ಯದರ್ಶಿ ವಿನೋದ್ ರೈ ಕೊಳ್ತಿಗೆ ಕೆಳಗಿನಮನೆ, ಕೋಶಾಧಿಕಾರಿ ಹರೀಶ್ ಅಮಳ, ರಜತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಶೋಭಿತ್ ಕೆಮ್ಮಾರ, ಕೋಶಾಧಿಕಾರಿ ಹರೀಶ್ ರೈ ಕೊಳ್ತಿಗೆ ಕೆಳಗಿಮನೆ, ಸ್ವಾಗತ ಸಮಿತಿಯ ಶಾಹುಲ್ ಅಮಳ, ಸುರೇಶ್ ಗೌಡ ಕೆಮ್ಮಾರ, ಅಶೋಕ್ ಅರಿಕ್ಕಿಲ, ಕಿಶೋರ್ ಬಾಯಂಬಾಡಿ, ಮೋಕ್ಷಿತ್ ಬಾಯಂಬಾಡಿ, ಶಿವರಾಮ ಕೆಮ್ಮಾರ, ಕ್ರೀಡಾ ಸಮಿತಿಯ ರೋಹಿತ್ ಬಾರಿಕೆ, ಪ್ರವೀಣ್ ಕೆಮ್ಮಾರ, ಚೇತನ್ ಕುದ್ಕುಳಿ, ಅನುಷ್ ರೈ ಕೊಳ್ತಿಗೆ ಕೆಳಗಿನಮನೆ, ವಿಜೇತ್ ಕುದ್ಕುಳಿ, ಯೋಗೀಶ್ ಕೆಮ್ಮಾರ, ಸಾಂಸ್ಕೃತಿಕ ಸಮಿತಿಯ ಕೀರ್ತನ್ ಬಾಯಂಬಾಡಿ, ವಿವೇಕ್ ಕಜೆ, ವಿಕಾಶ್ ರೈ ಕೊಳ್ತಿಗೆ ಕೆಳಗಿನಮನೆ, ಪ್ರಶಾಂತ್ ಬಾಯಂಬಾಡಿ, ಪ್ರಜ್ವಲ್ ನೂಜಿ, ಹರ್ಷಿತ್ ಕೆಮ್ಮಾರ, ಊಟೋಪಚಾರ ಸಮಿತಿಯ ವಿನೋದ್ ಪಾಪುತ್ತಡ್ಕ, ಶ್ಯಾಮ್ ಬಾಯಂಬಾಡಿ, ಅರುಣ್ ಕುಮಾರ್ ಅಟೋಳಿ, ಪ್ರವೀಣ್ ಬಾಯಂಬಾಡಿ, ನವೀನ್ ಅಟೋಳಿ, ಭರತ್ ಕೆಮ್ಮಾರ, ಸ್ವಚ್ಛತೆ ಮತ್ತು ಪಾರ್ಕಿಂಗ್ ಸಮಿತಿಯ ಯೋಗೀಶ್ ಪುನರಡ್ಕ, ಲೋಹಿತ್ ಪಾಪುತ್ತಡ್ಕ, ವರುಣ್ ಕೊಳತ್ತು, ಗೋಪಾಲಕೃಷ್ಣ ಅಟೋಳಿ, ಪ್ರತೀಕ್ ಅಟೋಳಿ, ಮಹಿಳಾ ಸಮಿತಿಯ ವೇದಾವತಿ ಕೆಮ್ಮಾರ, ಪುಷ್ಪಾವತಿ ಅಟೋಳಿ, ಅನಿತಾ ಮೇರಡ್ಕ, ವನಿತಾ ಬಾಯಂಬಾಡಿ, ಸಹನಾ ಅರಿಕ್ಕಿಲ, ಆಶಾಲತಾ, ದಿಶಾ ಬಾಯಂಬಾಡಿ, ಧೃತಿ ಬಾಯಂಬಾಡಿ, ತೃಷಾ ಅಟೋಳಿ, ಅರ್ಪಿತಾ ಬಾಯಂಬಾಡಿ, ಮಮತಾ ಕೆಮ್ಮಾರ, ಪ್ರೇಕ್ಷಾ ಅಡ್ಕರೆಗುರಿ, ಭವ್ಯಾ ಕೆಮ್ಮಾರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ಧನ ಎಂ.ಮೇರಡ್ಕ, ಉಪಾಧ್ಯಕ್ಷ ಶುಭವತಿ ಕೆಮ್ಮಾರ, ಸದಸ್ಯರಾದ ಅಬೂಬಕ್ಕರ್ ಕುಂಡಡ್ಕ, ಹರಿಣಿ ಬಾಯಂಬಾಡಿ, ಶಕೀಲಾ ಮೇರಡ್ಕ, ಚಂದ್ರಾವತಿ, ಶೃತಿ ಅಟೋಳಿ, ಪದ್ಮಾವತಿ ಬಾರಿಕೆ, ಅಬ್ದುಲ್ ರಹಮಾನ್, ಭಾಗೀರತಿ ಅಡ್ಕರೆಗುರಿ, ಗಿರಿಜಾ ಅಡ್ಕರೆಗುರಿ, ಗೀತಾ ಮೇರಡ್ಕ, ಅನಿತಾ ಮೇರಡ್ಕ, ಸುರೇಶ್ ಗೌಡ ಕೆಮ್ಮಾರ, ಫ್ರಾನ್ಸಿಸ್ ಕುದ್ಕುಳಿ, ಗೀತಾ ಬಾರಿಕೆ, ಪ್ರಮೀಳಾ ಅಡ್ಕರೆಗುರಿ, ರೂಪಾಶ್ರೀ ಪಾಂಬಾರು, ಸಹ ಶಿಕ್ಷಕ ರವಿರಾಜ್ ಕೆ, ಅತಿಥಿ ಶಿಕ್ಷಕಿ ಲತಾ ಕೆ, ಅಕ್ಷರದಾಸೋಹ ಸಿಬ್ಬಂದಿಗಳಾದ ವೇದಾವತಿ ಬಾಯಂಬಾಡಿ, ಶಾರದಾ ಅಟೋಳಿರವರು ಸಹಕರಿಸಿದರು.


ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯೆ ವೇದಾವತಿ ಕೆಮ್ಮಾರ, ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಪಡ್ರೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ದನ ಎಂ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ ಬಾಯಂಬಾಡಿ, ರಜತ ಸಂಭ್ರಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಯಂಬಾಡಿ, ವಿದ್ಯಾರ್ಥಿ ನಾಯಕ ಮಾ|ಸ್ವಸ್ತಿಕ್ ಕೆ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯತ್ ಕೆಮ್ಮಾರ ಸ್ವಾಗತಿಸಿ, ಗೌರವ ಶಿಕ್ಷಕಿ ಭವ್ಯ ಕಿರಣ್ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕ ಶಿವಪ್ರಸಾದ್‌ರವರು ಶಾಲಾ ವರದಿಯನ್ನು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವರದಿಯನ್ನು ಪ್ರಧಾನ ಕಾರ್ಯದರ್ಶಿ ವಿಜೇಶ್ ರೈ ಕೊಳ್ತಿಗೆ ಕೆಳಗಿನಮನೆರವರು ಮಂಡಿಸಿದರು. ವಿವಿಧ ಸ್ಪರ್ಧೆಗಳ ವಿಜೇತರ ಹೆಸರನ್ನು ಶಿಕ್ಷಕರಾದ ಪುಷ್ಪಾವತಿ, ಶಕುಂತಳಾ, ಸ್ನೇಹಪ್ರಭಾ ಓದಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.


‘ರಜತರತ್ನ’ ಸಾಧಕರಿಗೆ ಸನ್ಮಾನ..
ರಜತ ಮಹೋತ್ಸವದ ಅಂಗವಾಗಿ ಶಾಲೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ಅನೇಕ ಕ್ಷೇತ್ರದಲ್ಲಿ ಸಾಧಕರಾಗಿರುವ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿ ಕೊಳ್ತಿಗೆ ನಾರಾಯಣ ಗೌಡ, ನಿವೃತ್ತ ಶಿಕ್ಷಕ ಮಾಯಿಲಪ್ಪ ಗೌಡ, ನ್ಯಾಯವಾದಿ ಮೋಹಿತ್ ಕುಮಾರ್ ಕುಂಡಡ್ಕ, ಚಿತ್ರಕಲೆಯಲ್ಲಿ ಮಹೇಶ್ ಕುಂದಡ್ಕ, ಲೋಹಿತ್ ಅಟ್ಟೋಳಿ, ಯಕ್ಷಿತ್ ಬಾರಿಕೆ, ಭರತನಾಟ್ಯದಲ್ಲಿ ಕು.ಅಭಿಜ್ಞಾ ಅಟೋಳಿ ಅವರನ್ನು ‘ರಜತರತನ್ನ’ಗಳೆಂಬ ಹೆಸರಿನಡಿಯಲ್ಲಿ ಸನ್ಮಾನಿಸಲಾಯಿತು.

ರಂಜಿಸಿದ ಶಾಂಭವಿ ನಾಟಕ…
ಶಾಲಾ ರಜತ ಸಂಭ್ರಮದ ಪ್ರಯುಕ್ತ ಪುತ್ತೂರು ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಅಭಿನಯ ಕಲಾವಿದರು ಉಡುಪಿ ಕುತೂಹಲಭರಿತ ತುಳು ಹಾಸ್ಯಮಯ ನಾಟಕ ‘ಶಾಂಭವಿ’ ಪ್ರದರ್ಶನಗೊಂಡು ಪ್ರೇಕ್ಷಕರನ್ನು ರಂಜಿಸುವ ಮೂಲಕ ರಸದೌತಣ ನೀಡಿತು.

ಶಾಲೆ ‘ಮುಚ್ಚಿದರೆ’ ರಜತ ಸಂಭ್ರಮ ಕೇವಲ ‘ನೆನಪು’ ಮಾತ್ರ..
ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಬಹಳ ಕಷ್ಟ. ಆದರೆ ಇಲ್ಲಿನ ಯುವಕರು ಶಾಲೆಗೆ ಬೆನ್ನೆಲುಬಾಗಿ ನಿಂತು ಸ್ಪಂದಿಸಿರುವುದು ಶ್ಲಾಘನೀಯ. ಕರ್ನಾಟಕ ಸರಕಾರದ ಶಾಲೆಗಾಗಿ ನಾವು-ನೀವು ಯೋಜನೆಯಡಿಯಲ್ಲಿ ಕೇವಲ ಹೆಸರಿಗೋಸ್ಕರ ಶಾಲೆಯನ್ನು ದತ್ತು ತೆಗೆದುಕೊಂಡಿಲ್ಲ. ದತ್ತು ತೆಗೆದುಕೊಳ್ಳುತ್ತೇನೆ ಎಂದು ನಾಳೆ ಯಾರಾದರೂ ಮುಂದೆ ಬಂದರೆ ನಾನು ಹಿಂದೆ ನಿಂತು ಅವರಿಗೆ ಪ್ರೋತ್ಸಾಹ ಕೊಡುತ್ತೇನೆ. ಶಾಲೆಯ ದಾಖಲಾತಿಯಲ್ಲಿ ಮಕ್ಕಳ ಸಂಖ್ಯೆಯನ್ನು ಜಾಸ್ತಿ ಮಾಡಿದಾಗ ಮಾತ್ರ ಶಾಲೆಯ ಅಭಿವೃದ್ಧಿಗೆ ನಮಗೆ ಸರಕಾರಕ್ಕೆ ಮನವಿ ಮಾಡಬಹುದಾಗಿದೆ. ಮಕ್ಕಳಿಲ್ಲದೆ ಶಾಲೆ ಗೇಟ್ ಮುಚ್ಚಿದರೆ ಅದು ಶಾಶ್ವತವಾಗಿ ಮುಚ್ಚಿ ಹೋಗಬಹುದು ಇದರಿಂದ ನಾವು ಆಚರಿಸುವ ರಜತ ಸಂಭ್ರಮ ಕೇವಲ ನೆನಪಾಗಿ ಉಳಿಯಬಹುದು.
-ಭಾಗ್ಯೇಶ್ ರೈ, ಅಧ್ಯಕ್ಷರು, ವಿದ್ಯಾಮಾತ ಫೌಂಡೇಶನ್

LEAVE A REPLY

Please enter your comment!
Please enter your name here