ಪುತ್ತೂರು: ವಿದ್ಯೆ ಎಲ್ಲರೂ ಕಲಿಯಬೇಕು, ವಿದ್ಯಾವಂತ ಸತ್ಪ್ರಜೆಗಳಿಂದ ಭಾರತ ವಿಶ್ವ ಗುರುವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ಅವರು ಕೇಪು ಗ್ರಾಮದ ಪಡಿಬಾಗಿಲು ವಿದ್ಯಾಗಿರಿ ಸರಕಾರಿ ಹಿ.ಪ್ರಾ.ಶಾಲಾ ಬೆಳ್ಳಿ ಹಬ್ಬ ಮತ್ತು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊತೆಯುತ್ತದೆ, ಶಾಲೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯದ ಕೊರತೆಯಿಲ್ಲ, ಶಿಕ್ಷಕರ ಕೊರತೆಯೂ ಇಲ್ಲ. ಮಕ್ಕಳಿಗೆ ಕಲಿಯಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಸರಕಾರ ಮಾಡುತ್ತಿದೆ. ಗ್ರಾಮಸ್ಥರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವ ಮೂಲಕ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮಕ್ಕೆ ಎರಡು ಕೆಪಿಎಸ್ ಸ್ಕೂಲ್ ಆರಂಭ ಮಾಡಲಾಗುವುದು. ಇದಕ್ಕಾಗಿ 2500 ಕೋಟಿ ರೂ ಮೀಸಲಿಡಲಾಗಿದೆ ಎಂದು ಹೇಳಿದರು.
ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣ ಒಂದು ಬಾರಿಯೂ ಬಾರದೇ ಇದ್ದರೆ ಶಾಸಕರ ಕಚೇರಿಗೆ ಬಂದು ಸರಿಮಾಡಿಕೊಳ್ಳಿ ಎಂದು ಹೇಳಿದ ಶಾಸಕರು ಯಾವುದೇ ಕೆಲಸ ಆಗದೇ ಇದ್ದರೂ ನನ್ನ ಕಚೇರಿಯಲ್ಲಿರುವ ಸಿಬ್ಬಂದಿಗಳನ್ನು ಭೇಟಿಯಾಗಿ ಪರಿಹರಿಸಿಕೊಳ್ಳಿ ಎಂದು ಶಾಸಕರು ಮನವಿ ಮಾಡಿದರು.
ವೇದಿಕೆಯಲ್ಲಿ ಕೇಪು ಗ್ರಾ.ಪಂ ಅಧ್ಯಕ್ಷ ರಾಘವ ಸಾರಡ್ಕ , ಸದಸ್ಯ ಪುರುಷೋತ್ತಮ ಗೌಡ , ಜಗಜೀವನ್ ರಾಮ್ ಶೆಟ್ಟಿ, ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ ಎಸ್ ಕೃಷ್ಣ ಭಟ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿದ್ಯಾಸಿರಿ ಶಿಕ್ಷಣ ಕೇಂದ್ರದ ಅಧ್ಯಕ್ಷ ಫ್ರಭಾಕರ ಶೆಟ್ಟಿ ದಂಬೆಕಾನ, ಗೌರವಾಧ್ಯಕ್ಷ ಲಿಂಗಪ್ಪ ಗೌಡ ಅಳಿಕೆ, ಕಾರ್ಯದರ್ಶಿ ಜಿನಚಂದ್ರ, ಸಂಗಮ ಯುವಕ ಮಂಡಲದ ಉಪಾಧ್ಯಕ್ಷ ರಾಘವ ಮೈರ, ಸಿಆರ್ ಪಿ ಪುಷ್ಪಾ ಮೇರಿ, ಬೆಳ್ಳಿ ಹಬ್ಬ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಚೆಲ್ಯಡ್ಕ, ಹಿರಿಯರಾದ ಭಾಸ್ಕರ ಅಡ್ವಾಳ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಎಂ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.