ಪುತ್ತೂರು:ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಹಾಗೂ ಉಪಾಧ್ಯಕ್ಷರಾಗಿ ಬಿ.ಯು ಸುರೇಶ್ ಕೇಪುಳುರವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನಗಳನ್ನು ಹೊಂದಿರುವ ಸಂಘದಲ್ಲಿ ಸಾಮಾನ್ಯ ಸ್ಥಾನದಿಂದ ಬಾಲಪ್ಪ ಪೂಜಾರಿ ಯಾನೆ ಸುಂದರ ಪೂಜಾರಿ ಬಡಾವು, ದಿನೇಶ್ ಸಾಲಿಯಾನ್ ಉರೆಸಾಗು ಬನ್ನೂರು, ನಾಗೇಶ ಮೂಲ್ಯ ಬನ್ನೂರು, ಮೋನಪ್ಪ ಗೌಡ ಬೀರಿಗ, ಶ್ರೀಧರ ಪೂಜಾರಿ ಬಡಾವು, ಗಂಗಾಧರ ಎ.ವಿ ಅಲುಂಬುಡ, ಸುದರ್ಶನ್ ಪಡೀಲು, ಹಿಂದುಳಿದ ವರ್ಗ ಎ ಸ್ಥಾನದಿಂದ ಬಿ.ಯು ಸುರೇಶ್ ಕೇಪುಳು, ಹಿಂದುಳಿದ ವರ್ಗ ಬಿ ಸ್ಥಾನದಿಂದ ರಾಜೇಶ್ ಗೌಡ ಗೋಳ್ತಿಲ, ಮಹಿಳಾ ಸ್ಥಾನದಿಂದ ಜಾನಕಿ ಅನಂತಿಮಾರ್, ನಿರ್ಮಲ ಕೆಳಗಿನಮನೆ ಹಾಗೂ ಪ.ಜಾತಿ ಸ್ಥಾನದಿಂದ ಮುದರ ಬನ್ನೂರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ಜ.5ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸುಂದರ ಪೂಜಾರಿಯವರಿಗೆ ರಾಜೇಶ್ ಗೌಡ ಸೂಚಕರಾಗಿ ಮತ್ತು ಶ್ರೀಧರ ಪೂಜಾರಿ ಅನುಮೋದಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ.ಯು ಸುರೇಶ್‌ರವರಿಗೆ ನಾಗೇಶ್ ಮೂಲ್ಯ ಸೂಚಕರಾಗಿ ಹಾಗೂ ಗಂಗಾಧರ ಎ.ವಿ ಅನುಮೋದಕರಾಗಿದ್ದರು. ನಿರ್ದೇಶಕರಾದ ದಿನೇಶ್ ಸಾಲಿಯಾನ್, ಮೋನಪ್ಪ ಗೌಡ, ಸುದರ್ಶನ್, ಜಾನಕಿ, ನಿರ್ಮಲ ಹಾಗೂ ಮುದರು ಉಪಸ್ಥಿತರಿದ್ದರು. ಮಂಗಳೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಅನುರಾಧ ಯು ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಸಂಘವು ರಾಜಕೀಯ ರಹಿತವಾಗಿರಬೇಕು. ಇದಕ್ಕಾಗಿ ನಿರ್ದೇಶಕರ ಅವಿರೋಧವಾಗಿ ಆಯ್ಕೆಯಾಗಬೇಕು ಎಂಬ ನನ್ನ ಆಕಾಂಕ್ಷೆ ಈಡೇರಿದೆ. ನೂತನ ಆಡಳಿತ ಮಂಡಳಿ ರಚನೆಯಾಗಿದ್ದು ಮುಂದೆಯೂ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಉತ್ತಮ ಆಡಳಿತ ನಡೆಸಲಾಗುವುದು. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ.
ಸುಂದರ ಪೂಜಾರಿ ಬಡಾವು, ಅಧ್ಯಕ್ಷರು