ಮೇರಿ ಫೆರ್ನಾಂಡೀಸ್ ನಿಧನ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಮ್ಯಾನೇಜರ್ ವಿ.ಜೆ ಫೆರ್ನಾಂಡೀಸ್ ತಾಯಿ ಮೇರಿ ಫೆರ್ನಾಂಡೀಸ್(92) ರವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಜ.10 ರಂದು ಬೆಳಿಗ್ಗೆ ಕಿರಿಯ ಪುತ್ರ ವಾಲ್ಟರ್ ಫೆರ್ನಾಂಡೀಸ್ ರವರ ಮಡಿಕೇರಿ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.


ಮೃತರು ಪುತ್ರರಾದ ಲೂವಿಸ್ ಫೆರ್ನಾಂಡೀಸ್ ಎಪಿಎಂಸಿ ರಸ್ತೆ, ವಿ.ಜೆ ಫೆರ್ನಾಂಡೀಸ್ ಪಾಂಗ್ಲಾಯಿ, ವಾಲ್ಟರ್ ಫೆರ್ನಾಂಡೀಸ್ ಮಡಿಕೇರಿ, ಪುತ್ರಿಯರಾದ ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಲೀನಾ ಫೆರ್ನಾಂಡೀಸ್ ಸಾಮೆತ್ತಡ್ಕ, ಲಿಲ್ಲಿ ಫೆರ್ನಾಂಡೀಸ್ ಮಂಗಳಾದೇವಿ ಮಂಗಳೂರುರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.10 ರಂದು ಅಪರಾಹ್ನ ಮಡಿಕೇರಿ ಸೈಂಟ್ ಮೈಕಲ್ಸ್ ಚರ್ಚ್ ನಲ್ಲಿ ಜರಗಲಿದೆ ಎಂದು ಮೃತರ ಕುಟುಂಬ ಮೂಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here