ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಉಪ್ಪಿನಂಗಡಿ ವಲಯ ಒಕ್ಕೂಟ ಪದಾಧಿಕಾರಿಗಳ ತರಬೇತಿಯು ಜ.7ರಂದು ಉಪ್ಪಿನಂಗಡಿ ಗಾಣಿಗ ಸಮುದಾಯ ಭವದಲ್ಲಿ ನಡೆಯಿತು.
ವಲಯಾಧ್ಯಕ್ಷ ನಾರಾಯಣ ಕೆಳಗಿನಮನೆ ಅವರು ದೀಪ ಬೆಳಗಿಸಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ಅವರು ಯೋಜನೆಯ ವಿವಿಧ ವಿಭಾಗಗಳ, ಅಧಿಕಾರಿ ವರ್ಗದವರ ಪರಿಚಯ, ಬಡ್ಡಿ ದರಗಳ ಬಗ್ಗೆ, ಮಾಸಿಕ ವರದಿ ಹಾಗೂ ಮರುಪಾವತಿ ಚೀಟಿಯ ಉಪಯೋಗ, ಪಿಆರ್‌ಕೆ ನಿಬಂಧನೆಗಳ ಬಗ್ಗೆ, ಪಿಆರ್‌ಕೆ ಪ್ರೀಮಿಯಂ ಮೊತ್ತ, ಪಿಎಚ್‌ಎಸ್‌ಸಿ ಬಗ್ಗೆ, ಸಾಲದ ಡಿಪಿ ಮೊತ್ತದ ಬಗ್ಗೆ, ಮೆಂಬರ್ ಲೀಡ್ ಆಪ್, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಜನಮಂಗಳ ಕಾರ್ಯಕ್ರಮ, ಒಕ್ಕೂಟದ ಪ್ರಯೋಜನ ಉದ್ದೇಶ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಆಂತರಿಕ ಲೆಕ್ಕಪರಿಶೋಧಕರಾದ ಲತಾ ಅವರು, ಮೈಕ್ರೋ ಬಚತ್ ಮತ್ತು ಭೀಮಾ ಜ್ಯೋತಿಯ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಜನಮಂಗಲ ಕಾರ್ಯಕ್ರಮ ದಡಿಯಲ್ಲಿ ವಾಕಿಂಗ್ ಸ್ಟಿಕ್ ಮತ್ತು ವಾಟರ್ ಬೆಡ್ ವಿತರಣೆ ಮಾಡಲಾಯಿತು. ವಲಯದಲ್ಲಿ 18 ಜನರಿಗೆ ಮಾಸಾಸನ ಮಂಜೂರಾಗಿದ್ದು ಈ ಪೈಕಿ 5 ಜನರಿಗೆ ಮಂಜೂರಾತಿ ಪತ್ರ ನೀಡಲಾಯಿತು. ಬೇರೆ ಬೇರೆ ಗುರಿ ಸಾಧನೆಯಲ್ಲಿ ಸಾಧನೆ ಮಾಡಿದ ಸೇವಾ ಪ್ರತಿನಿಧಿಯವರನ್ನು ಗುರುತಿಸಲಾಯಿತು. ವಲಯದ ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಮಮತಾ ಸ್ವಾಗತಿಸಿದರು.