ಪುತ್ತೂರು: ಇರ್ದೆ- ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಬೆಟ್ಟಂಪಾಡಿ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಪುತ್ತೂರು
ಇವುಗಳ ಜಂಟಿ ಆಶ್ರಯದಲ್ಲಿ ಜ.11ರಿಂದ 25ರ ವರೆಗೆ, ಸುಮಾರು 15 ದಿನಗಳ ಕಾಲ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರ ಕಾರ್ಯಕ್ರಮ ನಡೆಯಲಿದೆ.
ಯಾವುದೇ ರೀತಿಯ ಔಷಧವಿಲ್ಲದೆಯೇ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಉಚಿತ ಥೆರಪಿಯೂ ಪ್ರತಿದಿನ ಬೆಳಗ್ಗೆ 9-30ರಿಂದ ಸಂಜೆ 4-30ರ ವರೆಗೆ ನಡೆಯಲಿದೆ.
ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ನೆರವೇರಿಸಿ, ಶುಭ ಹಾರೈಸಲಿರುವರು. ಅಧ್ಯಕ್ಷತೆಯನ್ನು ಇರ್ದೆ -ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್.ರಂಗನಾಥ ರೈ ವಹಿಸಲಿರುವರು.
ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ,ಬೆಟ್ಟಂಪಾಡಿ ಮಂಡಲ ಪಂಚಾಯತ್ ನ ಮಾಜಿ ಮಂಡಲ ಪ್ರಧಾನರಾದ ಪರಮೇಶ್ವರ ಭಟ್ ಕೋನಡ್ಕ ಹಾಗೂ ಇರ್ದೆ – ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಉಚಿತ ಥೆರಪಿಯ ಪ್ರಯೋಜನ ಪಡೆಯುವಂತೆ ಸಂಸ್ಥೆ ಮುಖ್ಯಸ್ಥ ಕೆ.ಪ್ರಭಾಕರ ಸಾಲ್ಯಾನ್ ವಿನಂತಿಸಿದ್ದಾರೆ.