ಪುತ್ತೂರು ತಾಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಅಸ್ತಿತ್ವಕ್ಕೆ

0

ಪುತ್ತೂರು: ಪುತ್ತೂರು ತಾಲೂಕಿನಲ್ಲಿ 8 ಸರಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಇದೀಗ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಸೇರಿಕೊಂಡು ತಮ್ಮ ಹೊಸ ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಇತ್ತೀಚೆಗೆ ಉಪನ್ಯಾಸಕರು ಸೇರಿಕೊಂಡು ಸಭೆ ನಡೆಸಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ನೂತನ ಅಧ್ಯಕ್ಷರಾಗಿ ಬೆಳಿಯೂರುಕಟ್ಟೆ ಸ.ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಹರಿಪ್ರಕಾಶ್ ಬೈಲಾಡಿ, ಉಪಾಧ್ಯಕ್ಷರಾಗಿ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಬೇರಿಕೆ ಈಶ್ವರ ಭಟ್ ಮತ್ತು ಕಾರ್ಯದರ್ಶಿಯಾಗಿ ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ರಮೇಶ್ ಹೆಚ್.ಜೆ ಆಯ್ಕೆಗೊಂಡಿದ್ದಾರೆ.

ಜೊತೆ ಕಾರ್ಯದರ್ಶಿಯಾಗಿ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ವಿನೋದ್, ಕೋಶಾಧಿಕಾರಿಯಾಗಿ ಕಬಕ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಭೌತಶಾಸ್ತ್ರ ಉಪನ್ಯಾಸಕ ಶ್ರೀನಿವಾಸ ಬಡೆಕ್ಕಿಲಾಯ, ಸಂಘಟನಾ ಕಾರ್ಯದರ್ಶಿಯಾಗಿ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಕಾಶ್ ವಿ.ಕೆ ಅವರು ಆಯ್ಕೆಗೊಂಡಿದ್ದಾರೆ. ಉಳಿದಂತೆ ಕಾಲೇಜು ಪ್ರತಿನಿಧಿಗಳಾಗಿ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಗೌತಮ ಕಾಮತ್ ಕೆ, ಸ.,ಮಹಿಳಾ ಕಾಲೇಜಿನ ಅಶೋಕ್ ಪಿ, ಕಬಕ ಸ.ಪ.ಪೂ ಕಾಲೇಜಿನ ನಯನ ಕುಮಾರಿ, ಕುಂಬ್ರ ಸ.ಪ.ಪೂ ಕಾಲೇಜಿನ ಹೇಮಲತಾ, ಉಪ್ಪಿನಂಗಡಿ ಕಾಲೇಜಿನ ಜನಾರ್ದನ ಗೌಡ, ಬೆಟ್ಟಂಪಾಡಿ ಕಾಲೇಜಿನ ಕಮಲಾಕ್ಷ, ಕೆಯ್ಯೂರು ಕಾಲೇಜಿನ ಇಸ್ಮಾಯಿಲ್, ಬೆಳಿಯೂರು ಕಾಲೇಜಿನ ಇಂದಿರಾ ಭಂಡಾರಿ ಆಯ್ಕೆಗೊಂಡಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here