ಜ.16ರಂದು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸತ್ಯ ನಾರಾಯಣ ಪೂಜೆ

0

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಾಧಿಕಾರಿ ಕಂದಾಯ ನಿರೀಕ್ಷಕ ಗೋಪಾಲ್ ಅಧ್ಯಕ್ಷತೆಯಲ್ಲಿ ಜ.8ರಂದು ನಡೆದ ಸಭೆಯಲ್ಲಿ ವರ್ಷಾವಧಿ ಜಾತ್ರೋತ್ಸವದ ದಿನದಂದು ಸರಳವಾಗಿ ವಿಶೇಷ ಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ರತೀ ವರ್ಷ ಕಿರುಷಷ್ಟಿಗೆ ಜಾತ್ರೋತ್ಸವ ನಡೆಯುವುದು ಪದ್ದತಿಯಾಗಿದ್ದು, ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ದೇವರನ್ನು ಬಾಲಾಲಯದಲ್ಲಿ ಇರಿಸಲಾಗಿದ್ದು, ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವಕ ಕಲಶ, ಗಣಹೋಮ ನಡೆಸಿ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.

ಜ.16ರಂದು ಸತ್ಯ ನಾರಾಯಣ ಪೂಜೆ :
ವರ್ಷಾವಧಿ ಮಕರ ಸಂಕ್ರಮಣದಂದು ನಡೆಯುವ ಸಾರ್ವಜನಿಕ ಸತ್ಯನಾರಾಯಣ ಪೂಜೆ ಕಿರುಷಷ್ಟಿ ದಿನವಾದ ಜ.16 ರಂದು ನಡೆಯಲಿದ್ದು, ಪ್ರತೀ ಮನೆಯಿಂದ ರೂ.100 ಪಾವತಿಸಿ ರಶೀದಿ ಪಡೆಯುವ ಮೂಲಕ ಸತ್ಯನಾರಾಯಣ ಪೂಜೆಗೆ ಸಹಕರಿಸುವಂತೆ ಗ್ರಾಮಸ್ಥರು ಹಾಗೂ ಭಕ್ತಾಧಿಗಳನ್ನು ವಿನಂತಿಸಲಾಯಿತು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್, ಗೌರವ ಸಲಹೆಗಾರರಾದ ಅರ್ಚಕ ಸಂದೀಪ ಕಾರಂತ, ದೇವಯ್ಯ ಗೌಡ, ದಾಮೋದರ ರೈ, ಕಿಶೋರ ಗೌಡ ಮರಿಕೆ, ವಿಠಲ ರೈ ಮೇರ್ಲ, ಬಾಲಚಂದ್ರ ಗೌಡ ದೇವಸ್ಯ, ಗಿರೀಶ್ ಕಿನ್ನಿಜಾಲ್, ಪ್ರಜ್ವಲ್ ರೈ ತೊಟ್ಲ, ಭಾರತಿ ಶಾಂತಪ್ಪ, ಸುಮಾ ಭಟ್, ಗೀತಾ ಕಾರಂತ, ಹರಿಣ ವಸಂತ ರೈ, ಹರೀಶ್ ಪೂಜಾರಿ ಕಾರ್ಪಾಡಿ, ರಾಮಚಂದ್ರ ಕುಲಾಲ್ ಬಳಕ್ಕ, ಚಂದ್ರಕಲಾ ಜಗದೀಶ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here