ಸಾಮಾಜಿಕ ಜವಾಬ್ದಾರಿಯನ್ನು ಎಸ್ ಅರ್ ಕೆ ಹೊಂದಿದೆ-ಎಮ್ ಬಿ ಸದಾಶಿವ
ಪುತ್ತೂರು: ಎಸ್.ಆರ್.ಕೆ.ಲ್ಯಾಡರ್ಸ್ ನ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ವರ್ಷಪೂರ್ತಿ ನಡೆಯವ ಕಾರ್ಯಕ್ರಮದಲ್ಲಿ ಸುಳ್ಯ ಸಾಂದೀಪ ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹ ಕೂಟ ಕಾರ್ಯಕ್ರಮ ಜ.13 ರಂದು ಮುಕ್ರಂಪಾಡಿ ಎಸ್ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಸನ್ಮಾನ:
ಶೈಕ್ಷಣಿಕ ಕ್ಷೇತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡು ವಿಶೇಷ ಚೇತನ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಉತ್ತಮ ಸೇವೆ ಮಾಡುತ್ತಿರುವ ಸುಳ್ಯದ ಎಂ.ಬಿ ಪೌಂಡೇಶನ್ ಸಂಸ್ಥೆಯ ಅಧ್ಯಕ್ಷ ಎಮ್ ಬಿ ಸದಾಶಿವ ಮತ್ತು ಹರಿಣಿ ಸದಾಶಿವ ದಂಪತಿಗೆ ಎಸ್ ಆರ್ ಕೆ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಸಂಸ್ಥೆಯ 7 ಮಂದಿ ಶಿಕ್ಷಕರಿಗೆ ಹಾಗು ಸಂಸ್ಥೆಯ ಎಲ್ಲಾ ಮಕ್ಕಳಿಗಳನ್ನು ಗೌರವಿಸಲಾಯಿತು.
ಬೀಳ್ಕೊಡುಗೆ:
ಎಸ್ ಆರ್ ಕೆ ಲ್ಯಾಡರ್ಸ್ ನಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಸ್ವಾತಿ ಅವರನ್ನು ಸಂಸ್ಥೆಯಿಂದ ಬೀಳ್ಕೊಡಲಾಯಿತು.
ಸಾಮಾಜಿಕ ಜವಾಬ್ದಾರಿಯನ್ನು ಎಸ್ ಅರ್ ಕೆ ಹೊಂದಿದೆ:
ಎಂ.ಬಿ ಪೌಂಡೇಶನ್ ಸಂಸ್ಥೆಯ ಅಧ್ಯಕ್ಷ ಎಮ್ ಬಿ ಸದಾಶಿವ ಅವರು ಮಾತನಾಡಿ ನಾವು ಅನೇಕ ವರ್ಷದಿಂದ ಈ ಕ್ಷೇತ್ರದಲ್ಲಿ ಇದ್ದೇವೆ. ಆದರೆ ಯಾರು ದೊಡ್ಡ ಸಂಸ್ಥೆಗಳು, ಸಂಘ ಸಂಸ್ಥೆಗಳು ನಮ್ಮ ಸಂಸ್ಥೆಯ ಕಡೆ ನೋಡಿಲ್ಲ. ಅದರೆ ಸಾಮಾಜಿಕ ಜವಾಬ್ದಾರಿಯನ್ನು ಆರ್ ಕೆ ಲ್ಯಾಡರ್ಸ್ ದೊಡ್ಡ ಹೆಜ್ಜೆ ಇಟ್ಟು ಮಾಡಿದೆ. ಇಂತಹ ಸಾಮಾಜಿಕ ಜವಾಬ್ದಾರಿ ಯಾರಲ್ಲೂ ನಾನು ಕಾಣಿಸಿಕೊಂಡಿಲ್ಲ. ಅವರು ನಮ್ಮ ಸಂಸ್ಥೆಗೆ ಬಂದು ಸಹಕಾರ ನೀಡಿದ್ದಾರೆ. ನಮ್ಮ ಸಂಸ್ಥೆಯಲ್ಲಿರುವ ಮಕ್ಕಳಿಗೆ ಕೇಲವರು ರೋಲ್ ಮೊಡೆಲ್ ಆಗಿದ್ದಾರೆ. ಅವರು ನಮ್ಮ ಮಕ್ಕಳ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ ಎಂದರು.
ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಎನೆಕಲ್ಲು ಮಾತನಾಡಿದರು. ಸುದ್ದಿ ಬಿಡುಗಡೆ ವರದಿಗಾರ ಲೋಕೇಶ್ ಬನ್ನೂರು ಉಪಸ್ಥಿತರಿದ್ದರು. ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ಪ್ರಾರ್ಥಿಸಿದರು.ಸಂಸ್ಥೆಯ ಸಿಬ್ಬಂದಿ ಯತೀಶ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಚೇತನ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮನೋಜ್ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.