ಪುತ್ತೂರು: ಜನವರಿ 14 ಕಾಸರಗೋಡಿನ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ಕನ್ನಡ ಅಧ್ಯಾಪಕರಿಗೆ ನಡೆದ ಎರಡು ದಿನದ ನವಚೇತನ ಸಹವಾಸ ಶಿಬಿರದ ತರಬೇತಿ ಕಾರ್ಯಗಾರದಲ್ಲಿ ಪುತ್ತೂರಿನ ರಂಗಬೆಳಕು ತಂಡದಿಂದ ತರಬೇತಿ ಮತ್ತು ಜಾಗೃತಿ ಗೀತೆಗಳು ಗೀತಾ ಗಾಯನ ವಿಶೇಷ ಕಾರ್ಯಕ್ರಮ ನಡೆಯಿತು.
ರಂಗಬೆಳಕು ತಂಡದಲ್ಲಿ ನಿರ್ದೇಶಕ ಕೃಷ್ಣಪ್ಪ ಬಂಬಿಲ, ನೀನಾಸಂ ಪದವೀಧರೆ ಭವಾನಿ ಕಾಂಚನ, ಜನಪದ ಕಲಾವಿದೆ ನೀಲಾವತಿ ಮೊಗ್ರ, ಕವಿತಾ ಸುಳ್ಯ ಮುಂತಾದ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಕಲಾವಿದರನ್ನು ಬರಮಾಡಿಕೊಂಡರು. ಸುಮಾರು ಎರಡು ಗಂಟೆಗಳ ಕಾಲ ತರಬೇತಿಯ ಜೊತೆಗೆ ಜಾಗೃತಿ ಗೀತೆಗಳು ಕಾರ್ಯಕ್ರಮ ನಡೆಯಿತು.