ರಾಮಕುಂಜ ಕ.ಮಾ.ಪ್ರೌಢಶಾಲೆಯಲ್ಲಿ ಪ್ರಥಮ ಬಾರಿಗೆ ಒಲಿಂಪಿಯಾಡ್ ಪರೀಕ್ಷೆ

0

ರಾಮಕುಂಜ: ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವಂತಹ ಒಲಿಂಪಿಯಾಡ್ ಪರೀಕ್ಷೆಯನ್ನು ನಡೆಸಲಾಯಿತು.
ಶಾಲೆಯ 53 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಪರೀಕ್ಷಾ ವಿಷಯವಾಗಿ ಗಣಿತ, ಇಂಗ್ಲೀಷ್ ಭಾಷೆ, ಖಗೋಳ ವಿಜ್ಞಾನ ಹಾಗೂ ಐಐಟಿ ನೀಟ್ ವಿಷಯವಿದ್ಜು, ನಾಲ್ಕು ವಿಭಾಗಗಳಿಗೆ ಶಾಲಾ ಮುಖ್ಯಗುರು ಸತೀಶ್ ಭಟ್‌ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದರು. ಪರೀಕ್ಷೆ ನಡೆಸಲು ಶಿಕ್ಷಕರಾದ ವಿಘ್ನೇಶ್ ವಿ ಮತ್ತು ಶಾಲಾ ಶಿಕ್ಷಕ ವೃಂದದವರು ಸಹಕರಿಸಿದ್ದರು.

LEAVE A REPLY

Please enter your comment!
Please enter your name here