- *ವಿದ್ಯಾರ್ಥಿಗಳಿಂದ ಯು.ಟಿ ಖಾದರ್ ಜೊತೆ ಸಂವಾದ
*ಶ್ವೇತ ಮೊಡಪ್ಪಾಡಿಯವರಿಂದ ಅಂಬೇಡ್ಕರ್ ವಿಚಾರಧಾರೆ ಉಪನ್ಯಾಸ
ಪುತ್ತೂರು: ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಇದರ ವತಿಯಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕನ್ನಡ ವಿಭಾಗ ವಿಶ್ವವಿದ್ಯಾ ನಿಲಯ ಕಾಲೇಜು ಹಂಪನಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿಯ ಪುನರಾವಲೋಕನ ವಿಶೇಷ ಶಿಬಿರ, ವಿಧಾನ ಸಭಾ ಅಧ್ಯಕ್ಷರಾದ ಯು.ಟಿ ಖಾದರ್ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಜ.21ರಂದು ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಜನಾರ್ದನ ಬಿ ಮತ್ತು ಬಳಗದವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಮಹಾನಗರ ಪಾಲಿಕೆ ಮಹಾಪೌರ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಶಿಬಿರದ ಉದ್ಘಾಟನೆ ನಡೆಯಲಿದ್ದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ|ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ, ಪುತ್ತೂರು ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೇ.ವಿಜಯ ಹಾರ್ವೀನ್, ಸಹಿತ ಹಲವು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರ, ಕಾರ್ಯಕ್ರಮ ಸಂಘಟಕ ಜನಾರ್ದನ ಬಿ, ನಿರ್ದೇಶಕಿ ಪ್ರಮೀಳಾ ಜನಾರ್ದನ್, ಹಿಂ.ವ.ಕ.ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ವಿವಿ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಾಧವ ಎಮ್.ಕೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಲತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್ ವಿಚಾರಧಾರೆಗಳ ಅರಿವು ಕಾರ್ಯಕ್ರಮ
ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಇದರ ವತಿಯಿಂದ ಮಹಾಮಾನವತವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದ್ದು ಈಗಾಗಲೇ ಅಂಬೇಡ್ಕರ್ ಓದು ಎಂಬ ಕಾರ್ಯಕ್ರಮದಡಿ ಪುತ್ತೂರು, ಸುಳ್ಯ,ಮಂಗಳೂರು ತಾಲೂಕುಗಳಲ್ಲಿ ಕಾರ್ಯಕ್ರಮ ನಡೆದು ಮಕ್ಕಳಲ್ಲಿ ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆದಿದೆ. ಇದು ಎಪ್ರೀಲ್ ತಿಂಗಳಾಂತ್ಯದ ತನಕ ನಡೆಯಲಿದೆ ಎಂದು ಸ್ವರ ಮಾಧುರ್ಯ ಬಳಗದ ಸಲಹೆಗಾರ ಜನಾರ್ದನ್ ಬಿ. ಪುತ್ತೂರುರವರು ತಿಳಿಸಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ವಿಚಾರ ಧಾರೆಗಳ ಕುರಿತು ಮೈಸೂರು ಧ್ವನಿ ಫೌಂಡೇಶನ್‌ನ ಸಂಸ್ಥಾಪಕಿ ಡಾ.ಶ್ವೇತ ಮೊಡಪ್ಪಾಡಿಯವರಿಂದ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 2.30ರಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಇವರಿಂದ ಸಂವಿಧಾನ ಕಾನೂನು ಎಂಬ ವಿಷಯದಲ್ಲಿ ಕಾನೂನು ಮಾಹಿತಿ ನಡೆಯಲಿದೆ. 3.30ರಿಂದ ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್ ಅವರಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸೇವಾ ಗೌರವ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಸಾಧಕರಿಗೆ ಸೇವಾ ಗೌರವ ನಡೆಯಲಿದ್ದು ಸಮಾಜ ಸೇವೆಯಲ್ಲಿ ಬಿ.ಕೆ ಸೇಸಪ್ಪ ಬೆದ್ರಕಾಡ್, ಚಿತ್ರಕಲೆಯಲ್ಲಿ ಜಗನ್ನಾಥ್ ಅರಿಯಡ್ಕ, ಪತ್ರಿಕೋದ್ಯಮದಲ್ಲಿ ಸಿಶೇ ಕಜೆಮಾರ್ ಪುತ್ತೂರು ಮತ್ತು ಹಸೈನಾರ್ ಜಯನಗರ ಸುಳ್ಯ, ಬಾಲ ಪ್ರತಿಭೆ ಅಸ್ಮಿತ್ ಎ.ಜೆ, ಸಂಗೀತ ಕ್ಷೇತ್ರದಲ್ಲಿ ಕೃಷ್ಣರಾಜ್ ಸುಳ್ಯ ಇವರುಗಳಿಗೆ ಸೇವಾ ಗೌರವ ಕಾರ್ಯಕ್ರಮ ನಡೆಯಲಿದೆ.