ಬಡಗನ್ನೂರು: ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೊತ್ಸವ ಜ.16ರಿಂದ ಜ.19ರವರೆಗೆ ನಡೆಯಲಿರುವುದು.
ಜ.16ರಂದು ಪೂ.ಗಂಟೆ 11ರಿಂದ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ ನಡೆಯಲಿದ್ದು, 17ರಂದು ಬೆಳಿಗ್ಗೆ ಗಂಟೆ 11ರಿಂದ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ ನಡೆಯಲಿದೆ. ಜ.18ನೇ ಗುರುವಾರದಂದು ಪೂ.7ರಿಂದ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು, ಮಲರಾಯ ದೈವದ ನೇಮ, ಪೂ.11ರಿಂದ ವ್ಯಾಘ್ರಚಾಮುಂಡಿ (ರಾಜನ್) ದೈವದ ನೇಮ. ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5 ಗಂಟೆಯಿಂದ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬರುವುದು. ರಾತ್ರಿ ಗಂಟೆ 7.30ರಿಂದ ಪಡುಮಲೆ-ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು, ಕಟ್ಟೆಪೂಜೆ, ಧ್ವಜಾವರೋಹಣ, ರುದ್ರಾಂಡಿ ದೈವದ ನೇಮ, ನವಕಾಭಿಷೇಕ, ಮಂತ್ರಾಕ್ಷತೆ, ಬಳಿಕ ಗುಳಿಗ ದೈವದ ನೇಮ ನಡೆಯಲಿದೆ.
ಜ.19ನೇ ಶುಕ್ರವಾರ ಬೆಳಿಗ್ಗೆ 10ರಿಂದ ಪಡುಮಲೆ ದೇವಸ್ಥಾನದ ಪಿಲಿಮಾಡದ ವಠಾರದಲ್ಲಿ ವ್ಯಾಘ್ರಚಾಮುಂಡಿ ದೈವದ ನೇಮ ನಡೆಯಲಿದೆ.