ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆ, ದೊಡ್ಡ ರಂಗಪೂಜೆ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಜ.14 ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಮತ್ತು ದೊಡ್ಡ ರಂಗಪೂಜೆ ನಡೆಯಿತು. ಬೆಳಿಗ್ಗೆ ನಾಗತಂಬಿಲ, ದೈವಗಳಿಗೆ ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.


ರಾತ್ರಿ ದೊಡ್ಡ ರಂಗಪೂಜೆ ಮಹಾಗಣಪತಿ ರಂಗಪೂಜೆ, ಸತ್ಯನಾರಾಯಣ ದೇವರ ಪೂಜೆ, ನಂತರ ಬಲಿ ಹೊರಟು ಉತ್ಸವ ನಡೆದು, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಈ ಸಂಧರ್ಭದಲ್ಲಿ ಆಡಳಿತಾಧಿಕಾರಿ ಗೋಪಾಲ.ಕೆ, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಊರಪರವೂರ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here