ಗೆಜ್ಜೆಗಿರಿ ಜಾತ್ರಾಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವರ್ಷಾವಧಿ ಜಾತ್ರೋತ್ಸವವು ಫೆ.25 ರಿಂದ 28 ತನಕ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.15 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಇರುವ ಈ ಕ್ಷೇತ್ರದ ಭಕ್ತಾಧಿಗಳು ತುಳುನಾಡಿನ ಕಾರಣಿಕ ಶಕ್ತಿಗಳ ಮೂಲಕ್ಷೇತ್ರದ  ನೇಮೋತ್ಸವ ಮತ್ತು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣಿತಾರಾಗುವಂತೆ ಕರೆ ನೀಡಿ ಶುಭ ಹಾರೈಸಿದರು.

ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ  ಶೈಲೇಂದ್ರ ವೈ ಸುವರ್ಣ, ಮಂಗಳೂರು ಮಾತನಾಡಿ ಸಮಾಜದ ಎಲ್ಲಾ ಸಂಘಸಂಸ್ಥೆಗಳು ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶೈಲೇಂದ್ರ ವೈ ಸುವರ್ಣ, ಮಂಗಳೂರು ಹಾಗೂ ಯುವವಾಹಿನಿ  ಕೇಂದ್ರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಕೆ ಪೂಜಾರಿ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕಂಕನಾಡಿ ಗರಡಿ ಅಧ್ಯಕ್ಷ ಕೆ ಚಿತ್ತರಂಜನ್, ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯಂತ್ ನಡುಬೈಲು, ಉಪಾಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ನಿತ್ಯಾನಂದ ಡಿ  ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಚಂದ್ರಶೇಖರ್ ಉಚ್ಚಿಲ್, ಸಂಜೀವ ಪೂಜಾರಿ, ಬಿರ್ವ, ಸುರೇಂದ್ರ ಪೂಜಾರಿ ಮುಂಬಯಿ, ಡಾ ರಾಜಾರಾಂ ಉಪ್ಪಿನಂಡಿ ಸುರೇಶ್ ಪೂಜಾರಿ ಅಳದಾಂಗಡಿ,, ಯುವವಾಹಿನಿ ಕೆಂದ್ರಸಮಿತಿ ಅಧ್ಯಕ್ಷ  ಹರೀಶ್ ಕೆ ಪೂಜಾರಿ, ಗೆಜ್ಜೆಗಿರಿ ವಕ್ತಾರ  ರಾಜೇಂದ್ರ ಚಿಲಿಂಬಿ,ಸಮಿತಿ ಸದಸ್ಯರಾದ  ವಿದ್ಯಾರಾಖೇಶ್ ಮಂಗಳೂರು, ಡಾ, ರಾಕೇಶ್ ಕುಮಾರ್, ನಾರಾಯಣ ಪೂಜಾರಿ ಮಚ್ಚಿನ, ಪ್ರವೀಣ್ ಅಂಚನ್ ಅರ್ಕುಲ, ಡಾ ಸಂತೋಷ್ ಕುಮಾರ್ ಪೆರಂ,ಪಳ್ಳಿ,ದೀಪಕ್ ಪಿಲಾರ್, ಶೇಖರ ಬಂಗೇರ ಬೆಳ್ತಂಗಡಿ, ಜಯರಾಮ ಬಂಗೇರ ಬೆಳ್ತಂಗಡಿ, ತ್ರಿವೇಣಿ ಕರುಣಾಕರ ಪೆರೋಡಿ, ಶೇಖರ ಪೆರೋಡಿ, ಉಮಾನಾಥ ಮಂಗಳೂರು, ಕೇಶವ ಎಂ ಎಸ್ ರಕ್ಷೀತ್ ಕುಂಪಾಳ, ಪ್ರಶಾಂತ್ ಬೆಳ್ತಂಗಡಿ ನೀಲಯ್ಯ ಮಳಲಿ, ಡಿ. ಆರ್. ರಾಜು, ಸುರೇಶ್ ಕೋಟ್ಯಾನ್ ಮೂಡಬಿದ್ರೆ, ಕುಮಾರ್ ಇರುವೈಲ್ ಮತ್ತಿತರರು ಗಣ್ಯರು, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪುತ್ತೂರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here