ಪುತ್ತೂರು : ಇಲ್ಲಿನ ಸಂತ ಫಿಲೋನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಪಿ ಎಸ್ ಕೃಷ್ಣ ಕುಮಾರ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ| ವಿಜಯಕುಮಾರ್ ಎಂ ಉಪ-ಪ್ರಾಂಶುಪಾಲರುಗಳಾಗಿ ನೇಮಕಗೊಂಡಿದ್ದಾರೆ.
ಡಾ.ಪಿ ಎಸ್ ಕೃಷ್ಣ ಕುಮಾರ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು ರಸಾಯನ ಶಾಸ್ತ್ರದಲ್ಲಿ 37 ವರ್ಷಗಳ ಬೋಧನಾನುಭವ ಹೊಂದಿರುತ್ತಾರೆ. ಇವರು ಕೆಮಿಕಲ್ ಕೈನೆಟಿಕ್ಸ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಡಾ. ವಿಜಯಕುಮಾರ್ ಎಂ ಸಂತ ಫಿಲೋಮಿನಾ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿ ಚೆನೈನ ಮದರಾಸು ವಿಶ್ವವಿದ್ಯಾನಿಲಯದಿಂದ ಎಂಎ ಹಾಗೂ ಎಂ ಫಿಲ್ ಪದವಿಗಳನ್ನು ಗಳಿಸಿರುತ್ತಾರೆ. 30 ವರ್ಷಗಳ ಬೋಧನಾನುಭವ ಹೊಂದಿರುವ ಇವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ನೂತನವಾಗಿ ನೇಮಕಗೊಂಡ ಉಪಪ್ರಾಂಶುಪಾಲರಿಗೆ ಕಾಲೇಜಿನ ಸಂಚಾಲರಕು, ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಹಾಗು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.