ಭಜನೆಯ ಮೂಲಕ ಶ್ರೀ ರಾಮನ ಪ್ರತಿಷ್ಠೆ ಸಂಭ್ರಮಿಸಿದ ಆದರ್ಶ ಆಸ್ಪತ್ರೆ – ರಾಮ ರಾಜ್ಯದ ಕಡೆಗೆ ನಮ್ಮ ನಡಿಗೆ ಪ್ರತಿಜ್ಞೆ ಸ್ವೀಕರಿಸಿ – ಡಾ. ಎಂ.ಕೆ.ಪ್ರಸಾದ್ ಕರೆ

0

ಪುತ್ತೂರು: ದೇಶದ ಉದ್ದಗಲಕ್ಕೂ ಒಂದು ರಾಮ ಮಂದಿರ, ಒಂದು ಕೃಷ್ಣನ ಮಂದಿರ ನೋಡುವ ಆಸೆ ಎಲ್ಲರದ್ದಾಗಿತ್ತು. ಅದರಲ್ಲಿ ಒಂದು ಭಾಗ ಆಗಿದೆ. ಇದು ಭಾರಿ ಹೋರಾಟದ ಫಲದಿಂದ ಆದ ಮಂದಿರ. ಇಂತಹ ಸಂದರ್ಭದಲ್ಲಿ ಮುಂದಿನ ದಿನ ರಾಮ ರಾಜ್ಯದ ಕಡೆಗೆ ನಮ್ಮ ನಡಿಗೆ ಇರಬೇಕೆಂದು ಎಲ್ಲರು ಪ್ರತಿಜ್ಞೆ ಸ್ವೀಕರಿಸಬೇಕೆಂದು ಡಾ. ಎಂ.ಕೆ.ಪ್ರಸಾದ್ ಕರೆ ನೀಡಿದ್ದಾರೆ.


ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಟೆ ಅಂಗವಾಗಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಜ.22ರಂದು ಸಂಜೆ ಭಜನೆ ಮತ್ತು ನೃತ್ಯ ಭಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇವತ್ತು ಒಂದು ಪೇಪರ್ ಇನ್ನೊಂದು ಟೇಬಲ್‌ಗೆ ಹೋಗಬೇಕಾದರೆ ದುಡ್ಡು ಕೊಡಬೇಕಾದ ಪರಿಸ್ಥಿತಿ ಬಂದಿದೆ. ಆದರೆ ರಾಮರಾಜ್ಯದಲ್ಲಿ ಈ ರೀತಿಯ ತೊಂದರೆ ಇರಲಿಲ್ಲ. ಕೋರ್ಟ್ ಕಚೇರಿಗಳಿಲ್ಲದೆ ರಾಮ ಜನರಿಗೆ ನ್ಯಾಯ ಕೊಡುತ್ತಿದ್ದ. ಇವತ್ತು ಮತ್ತೊಮ್ಮೆ ಅದೇ ರಾಮ ರಾಜ್ಯದ ಕನಸು ನನಸಾಗುತ್ತಿದ್ದು, ಅದನ್ನು ನಾವು ಯೋಚಿಸುತ್ತಿದ್ದೇವೆ. ಜ.22ರ ನಂತರ ಈ ದೇಶ ಟರ್ನ್ ಆಗುತ್ತದೆ. ಒಳ್ಳೆಯ ಕಡೆಗೆ ಹೋಗುತ್ತದೆ ಎಂಬ ಮಾತು ಕೇಳಿದ್ದೆ. ದೇಶ ಯಾವ ಕಡೆ ಹೋಗುತ್ತದೆ ಎಂಬುದನ್ನು ನೋಡಬೇಕು. ಇವತ್ತು ಅಯೋಧ್ಯೆಯ ಕಾರ್ಯಕ್ರಮಕ್ಕೆ ಕೆಲವು ಪಕ್ಷದವರು ಬಂದಿಲ್ಲ. ಆದರೆ ಜನರು ಬಂದಿದ್ದಾರೆ. ಅದೇ ಸಂತೋಷ. ಇಂತಹ ಸಂದರ್ಭದಲ್ಲಿ ನಾನು ನನ್ನಿಂದ ಆದಷ್ಟು ಮಟ್ಟಿಗೆ ರಾಮ ರಾಜ್ಯದ ಕಡೆಗೆ ನಡಿಗೆ ಇಡುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. ಆಸ್ಪತ್ರೆಯಲ್ಲೂ ಕೂಡಾ ಬಂದಿರುವ ರೋಗಿಗಳಿಗೆ ಒಳ್ಳೆಯ ರೀತಿಯಲ್ಲಿ ಗುಣಮುಖರಾಗುವಂತೆ ಕಳುಹಿಸಿಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಭಜನಾ ಕಾರ್ಯಕ್ರಮದ ಆರಂಭದಲ್ಲಿ ಡಾ. ಎಂ.ಕೆ.ಪ್ರಸಾದ್ ಡಾ. ಬಿ.ಶ್ಯಾಮ, ಡಾ. ಸುಬ್ರಾಯ ಭಟ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಐಡಿಯಲ್ ಲ್ಯಾಬ್‌ನ ಮಾಲಕರಾಗಿರುವ ನಗರಸಭೆ ಮಾಜಿ ಸದಸ್ಯ ಸುಜೀಂದ್ರ ಪ್ರಭು, ದಯಾನಂದ, ಕರುಣಾಕರ ಶೆಣೈ ಸಹಿತ ಸಿಬ್ಬಂದಿಗಳು ದೀಪ ಪ್ರಜ್ವಲಿಸಿದರು. ಬಳಿಕ ಸಿಬ್ಬಂದಿಗಳಿಂದ ಭಜನೆ ಮತ್ತು ನೃತ್ಯ ಭಜನೆ ನಡೆಯಿತು.

ಹಿಂದುಗಳಿಗೆ ಒಟ್ಟಾಗುವ ಮನಸ್ಸಿಲ್ಲ
ಹಿಂದೆ ಔರಂಗಜೇಬ ಕಾಶಿಯನ್ನು ಆಕ್ರಮಣ ಮಾಡಿದಾಗ ರಜಪೂತ್, ಮಹರಾಷ್ಟ್ರ, ಯಾದವರು, ಬಿಹಾರಿಗಳು ಸಹಿತ ಎಲ್ಲರಿದ್ದರೂ ಆದರೆ ಯಾರು ಒಟ್ಟಾಗಲಿಲ್ಲ. ಒಗ್ಗಟ್ಟಿನ ಕೊರತೆಯಿಂದ ಮಹಾರಾಷ್ಟ್ರದ ಮರಾಠರು ಮತ್ತು ರಜಪೂತರು ಔರಂಗಜೇಬನೊಂದಿಗೆ ಯದ್ದ ಮಾಡಿದರೂ ಸೋತರು. ಎಲ್ಲರು ಒಟ್ಟಾಗುತ್ತಿದ್ದರೆ ಆಕ್ರಮಣ ತಡೆಯಬಹುದಿತ್ತು. ಇವತ್ತು ಕೂಡಾ ಹಿಂದುಗಳಿಗೆ ಒಟ್ಟಾಗಬೇಕೆಂದಿಲ್ಲ. ಒಟ್ಟಾಗುವ ಮನಸ್ಸೂ ಇಲ್ಲ. ಆಸೆಯು ಇಲ್ಲ. ಆಯೋಧ್ಯೆ ಹೋರಾಟದ ಸಂದರ್ಭ ನರಸಿಂಹ ರಾವ್ ಇಲ್ಲದೇ ಇರುತ್ತಿದ್ದರೆ ಬಾಬರಿ ಮಸೀದಿ ಬೀಳುತ್ತನೇ ಇರಲಿಲ್ಲ. ಒಂದಂತು ನೆನಪಿಟ್ಟು ಕೊಳ್ಳಿ.
ಡಾ. ಎಂ.ಕೆ.ಪ್ರಸಾದ್

LEAVE A REPLY

Please enter your comment!
Please enter your name here