ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಶ್ರೀ ರಾಮೊತ್ಸವ

0

ನೆಲ್ಯಾಡಿ: ಅಯೋಧ್ಯೆಯಲ್ಲಿ ನಡೆದ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಮಹೋತ್ಸವದ ಪ್ರಯುಕ್ತ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಜ.22ರಂದು ಶ್ರೀ ರಾಮೋತ್ಸವವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಭಜನೆ, ಶ್ರೀರಾಮ ರಕ್ಷಾಸ್ತೋತ್ರ, ಹನುಮಾನ್ ಚಾಲೀಸ್, ರಾಮಾಯಣ ಆಧಾರಿತ ರಸಪ್ರಶ್ನೆಗಳು, 108 ಬಾರಿ ರಾಮತಾರಕ ಮಂತ್ರ ಹಾಗೂ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ವ್ಯವಸ್ಥೆ ಮಾಡಲಾಯಿತು. ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ಕರಸೇವಕರಾದ ಕೃಷ್ಣಪ್ಪ ಕಟ್ಟೆಮಜಲು, ಪೂವಪ್ಪ ಕೊಣಾಲು, ಕೊರಗಪ್ಪ ಆಲಂತಾಯ, ಬಾಬು ನಾಯ್ಕ ಆಲಂತಾಯ, ಪ್ರತಾಪ, ಗಂಗಾಧರ, ಪದ್ಮನಾಭ (ಅಣ್ಣಿ) ಬಂಗೇರ, ಕುಶಾಲಪ್ಪ ಪೂವಾಜೆ, ದಿ. ಉಮೇಶ್ ಕುಡ್ತಾಜೆರವರ ಪರವಾಗಿ ಇವರ ಪುತ್ರಿ ಸುಕನ್ಯ ಅವರಿಗೆ ವಿದ್ಯಾಲಯದ ಆಡಳಿತ ಸಮಿತಿ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.


ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನರವರು ಕರೆಸೇವಕರನ್ನು ಪರಿಚಯಿಸಿದರು. ಗೌರವಾರ್ಪಣೆ ಮಾಡಲಾಯಿತು. ಕರಸೇವಕರಾದ ಕುಶಾಲಪ್ಪ ಪೂವಾಜೆ ಮತ್ತು ಪೂವಪ್ಪ ಕೊಣಾಲುರವರು ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಭಾಗವಹಿಸಿದ ಅನುಭವವನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಅಧ್ಯಕ್ಷ ಡಾ.ಮುರುಳಿಧರರವರು ಶಿಲ್ಪಿ ಅರುಣ್ ಯೋಗ್ಯರಾಜ್‌ ಅವರ ಬಗ್ಗೆ ತಿಳಿಸಿದರು. ರಾಮಾಯಣ ಆಧಾರಿತ ರಸಪ್ರಶ್ನೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಯಿತು. ಆಡಳಿತ ಮಂಡಳಿಯ ಸದಸ್ಯ ಸುಬ್ರಾಯ ಪುಣಚ ಸ್ವಾಗತಿಸಿದರು. ಮಾತಾಜಿ ರೋಹಿಣಿ ವಂದಿಸಿದರು.

ಮಾತಾಜಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಭೂಮಿಕಾರವರು ವೈಯುಕ್ತಿಕ ಗೀತೆ ಹಾಡಿದರು.

LEAVE A REPLY

Please enter your comment!
Please enter your name here