ಪುತ್ತೂರು: 2023-24ನೇ ಸಾಲಿನ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ (SOF) ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಹಾಗೂ ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ ಪರೀಕ್ಷೆಯಲ್ಲಿ ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಚಿನ್ನದ ಪದಕವನ್ನು ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಸ್ವಸ್ತಿ ಎಂ. ಭಟ್(3ನೇ ತರಗತಿ), ಬಿನಿತಾ ನಾಯ್ಕ್ ( 4ನೇ ತರಗತಿ ), ಆರುಷಿ ಎಸ್. ಪುತ್ತೂರಾಯ (7ನೇ ತರಗತಿ), ಶ್ರಾವ್ಯ ನಾಯಕ್. ಪಿ (7 ನೇ ತರಗತಿ), ನಿಹಾಲ್ ಸಿ. ರೈ (8ನೇ ತರಗತಿ) ಹಾಗೂ ಗಣಿತ ವಿಷಯದಲ್ಲಿ ಸ್ವಸ್ತಿ ಎಂ. ಭಟ್ (3 ನೇ ತರಗತಿ), ಸಾನಿಧ್ಯ ಎಸ್. ರಾವ್ (4ನೇ ತರಗತಿ), ಅಭಿನವ್ ಶಂಕರ್ ಕಮ್ಮಾಜೆ (6ನೇ ತರಗತಿ), ಸೃಷ್ಟಿ ಎ. (7ನೇ ತರಗತಿ) ಇವರು ಚಿನ್ನದ ಪದಕವನ್ನು ಪಡೆದು ಕೊಂಡಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.