ಬೆಟ್ಟಂಪಾಡಿ-ಬೂಡ್‌ ರಸ್ತೆ ಕಾಮಗಾರಿಗೆ ಶಿಲಾನ್ಯಾಸ – ಕನಸು ಕಂಡದ್ದು ಮಾತ್ರ ಪ್ರಸ್ತಾವನೆಯೂ ಇಲ್ಲ, ಅನುದಾನವೂ ಇಲ್ಲ-ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳಿಗೆ ಅನುದಾನ ನೀಡಿದ್ದು ಸಿದ್ದರಾಮಯ್ಯ ಸರಕಾರ. ಆದರೆ ಇಲ್ಲೊಬ್ಬರು ಅದೆಲ್ಲದಕ್ಕೂ ನಾನೇ ಅನುದಾನ ತರಿಸಿದ್ದು, ನಾನೇ ಪ್ರಸ್ತಾವನೆ ಸಲ್ಲಿಸಿದ್ದು ಎಂದು ಊರಿಡೀ ಹೇಳುತ್ತಿದ್ದಾರೆ. ಅವರು ಕನಸು ಕಂಡದ್ದು ಮಾತ್ರ ಯಾವುದೇ ಪ್ರಸ್ತಾವನೆಯೂ ಇಲ್ಲ, ಅನುದಾನವೂ ತಂದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಜಿ ಶಾಸಕರಿಗೆ ಪರೋಕ್ಷವಾಗಿ ಕೆಣಕಿದ್ದಾರೆ.

ಅವರು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಬೆಟ್ಟಂಪಾಡಿ ಬೂಡ್‌ಗೆ ತೆರಳುವ ರಸ್ತೆಗೆ ರೂ 10 ಲಕ್ಷ ಅನುದಾನ ಮಂಜೂರಾಗಿದ್ದು ಇದರ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವಳಕ್ಕೆ ತೆರಳುವ ರಸ್ತೆಗೆ 10 ಲಕ್ಷ ಅನುದಾನವನ್ನು ಒದಗಿಸುವುದಾಗಿ ಶಾಸಕರು ಭರವಸೆ ನೀಡಿದರು. ಬೆಟ್ಟಂಪಾಡಿ ಗ್ರಾಮದ ಬಹುತೇಕ ರಸ್ತೆಗಳು ಈ ಬಾರಿ ಕಾಂ‌ಕ್ರಿಟೀಕರಣಗೊಳ್ಳಲಿದ್ದು ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಶಾಸಕರು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ, ಚುನಾವಣೆ ಪೂರ್ವ ಸಮಯದಲ್ಲಿ ಗ್ರಾಮಸ್ಥರಿಗೆ ನೀಡಿದ ಮಾತುಗಳನ್ನು ನಾವು ಈಡೇರಿಸುತ್ತಿದ್ದೇವೆ. ಶಾಸಕರಿಂದ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.


=ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ದೇವಪ್ಪ ಗೌಡ ಬಿ ಆರ್, ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಬ್ಲಾಕ್ ಮಾಜಿ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಗ್ರಾಪಂ ಸದಸ್ಯ ಮಹಾಲಿಂಗ ನಾಯ್ಕ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸ ವಿನೋದ್ ಕುಮಾರ್ ಬಲ್ಲಾಲ್, ಶಿವಕುಮಾರ್ ಬಲ್ಲಾಲ್, ಜಯರಾಜ್, ಬಲ್ಲಾಳ್, ವಲಯ ಮಾಜಿ ಅಧ್ಯಕ್ಷ ಮಾಧವ ಪೂಜಾರಿ, ಪುತ್ತು ಚೆಲ್ಯಡ್ಕ, ದಾಮೋದರ ಪಾಟಾಳಿ, ಸದಾಶಿವ ರೈ ಗುಮ್ಮಟಗದ್ದೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here