ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ಮಟ್ಟದ ದಿವ್ಯಜ್ಯೋತಿ ಸಂಜೀವಿನಿ ಒಕ್ಕೂಟದ 2022- 2023 ನೇ ಸಾಲಿನ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ನೀಲಾವತಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು. ಸಂಜೀವಿನಿಯ ತಾಲೂಕು ವ್ಯವಸ್ಥಾಪಕಿ ನಳಿನಿ ಅವರು ಎರಡು ವಾರ್ಡ್ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿಕೊಟ್ಟರಲ್ಲದೆ, ಅವರ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ನಳಿನಾಕ್ಷಿಯವರು, ಒಕ್ಕೂಟದ ಕಾರ್ಯ ವೈಖರಿ ಹಾಗೂ ಎನ್ಆರ್ಎಲ್ಎಂ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಸಂಘವನ್ನು ಇನ್ನಷ್ಟು ಬೆಳೆಸುವ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಭರತೇಶ್ ಅವರು ರೇಬಿಸ್ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.
ಉಪ್ಪಿನಂಗಡಿ ಗ್ರಾ.ಪಂ. ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್, ಆರೋಗ್ಯ ಸಹಾಯಕಿ ಗಾಯತ್ರಿ, ಗ್ರಾಮ ಆರೋಗ್ಯದ ತಾಲೂಕು ಸಂಯೋಜಕಿ ಅಶ್ವಿನಿ, ಆಶಾ ಕಾರ್ಯಕರ್ತೆ ಪುಷ್ಪ, ಒಕ್ಕೂಟದ ಸಿಬ್ಬಂದಿ ಪ್ರೇಮಲತಾ, ಜಯಶ್ರೀ ಜೆ. ಹಾಗೂ ಸ್ತ್ರೀ ಶಕ್ತಿ ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಚೈತ್ರ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಅರ್ಚನಾ ಎಂ.ಎಸ್. ವರದಿ ವಾಚಿಸಿದರು. ಕೃಷಿ ಸಖಿ ರಮ್ಯ ವಂದಿಸಿದರು. ಪಶು ಸಖಿ ಜಯಲಕ್ಷ್ಮೀ ಎಂ. ಕಾರ್ಯಕ್ರಮ ನಿರೂಪಿಸಿದರು.