ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ 3 ವರ್ಷದಿಂದ 6 ವರ್ಷದ ವರೆಗಿನ ಮಕ್ಕಳಿಗಾಗಿ “ಚಿಣ್ಣರ ಚಿತ್ತಾರ” ಕಾರ್ಯಕ್ರಮ ಫೆ.4ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿವೇಕಾನಂದ ಶಿಶುಮಂದಿರದ ಮುಖ್ಯ ಶಿಕ್ಷಕಿ ರೇಖಾ ಕುಮಾರಿ ಮಾತನಾಡಿ, ಮಕ್ಕಳ ಕಲಿಕೆಯ ಪ್ರಾರಂಭಿಕ ಹಂತವು ಸದೃಢವಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆಯಾದ ವಸಂತಿ ಕೆ., ಸಂಚಾಲಕರಾದ ಭರತ್ ಪೈ, ಪ್ರಾಂಶುಪಾಲೆ ಹಾಗೂ ಉಪಪ್ರಾಂಶುಪಾಲೆ ಉಪಸ್ಥಿರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ, ಬಹುಭಾಷಾ ಸಾಹಿತಿ ಉಲ್ಲಾಸ್ ಪೈ ಪಾಲಿಮಾರು ಮತ್ತು ವರ್ಣಕುಟೀರ ಸಂಸ್ಥೆಯ ಚಿತ್ರಕಲಾವಿದ ಪ್ರವೀಣ್ ಭಾಗವಹಿಸಿದ್ದರು. ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ಎಲ್ಲರ ಮನರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ಮತ್ತು ಕಿಟ್ ವಿತರಿಸಲಾಯಿತು. ಶಾಲಾ ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ನವನೀತಾ ವಂದಿಸಿದರು. ನರ್ಸರಿ ವಿಭಾಗದ ಸಂಯೋಜಕಿ ವಿನಯ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.