ಪುತ್ತೂರು: ‘ಅಜಾತ ಶತ್ರು’ ಎಂದು ಕರೆಯಲ್ಪಟ್ಟಿರುವ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರ 90 ರ ಸಂಭ್ರಮ ‘ನವತಿ ಸಂಭ್ರಮ’ ಕಾರ್ಯಕ್ರಮವು ‘ಅರಿಯಡ್ಕ ಚಿಕ್ಕಪ್ಪ ನಾೖಕ್ ರವರ 90 ರ ಸಂಭ್ರಮಾಚರಣಾ ಸಮಿತಿ’ ಯ ಆಶ್ರಯದಲ್ಲಿ ಫೆ. 24 ರಂದು ನಡೆಯಲಿದ್ದು, ಅದರ ಪೂರ್ವಭಾವಿ ಸಭೆ ಮತ್ತು ಆಮಂತ್ರಣ ಪತ್ರ ಬಿಡುಗಡೆಯು ಫೆ. 5 ರಂದು ದರ್ಬೆ ಪ್ರಶಾಂತ್ ಮಹಲ್ ನಲ್ಲಿ ಸಮಿತಿಯ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ಕೋಶಾಧಿಕಾರಿ ನೋಣಾಲು ಜೈರಾಜ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮಿತಿಯ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಹಾಗೂ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಕೋರಿದರು.
ಅಶ್ವಿನಿ ಹೊಟೇಲ್ ಮ್ಹಾಲಕ ಕರುಣಾಕರ ರೈ ದೇರ್ಲ, ರಾಕೇಶ್ ರೈ ಕೆಡೆಂಜಿ, ಬೂಡಿಯಾರ್ ರಾಧಾಕೃಷ್ಣ ರೈ, ದಯಾನಂದ ರೈ ಮನವಳಿಕೆ, ಸವಣೂರು ವಿದ್ಯಾರಶ್ಮಿ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ನಾರಾಯಣ ರೈ ಕುಕ್ಕುವಳ್ಳಿ, ಚಂದ್ರಹಾಸ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಮಹಾವೀರ ಆಸ್ಪತ್ರೆಯ ಆಡಳಿತ ನಿರ್ದೇಶಕ ಅಶೋಕ್ ಪಡಿವಾಳ್, ದುರ್ಗಾಪ್ರಸಾದ್ ರೈ ಕುಂಬ್ರ, ಪದ್ಮ ಸೋಲಾರ್ ನ ಪದ್ಮನಾಭ ಶೆಟ್ಟಿ, ರಾಜೇಶ್ ಬನ್ನೂರು, ಶಿವರಾಮ ಆಳ್ವ ಬಳ್ಳಮಜಲು, ಸೀತಾರಾಮ ರೈ ಕೈಕಾರ, ವಕೀಲೆ ಹರಿಣಾಕ್ಷಿ ಜೆ. ಶೆಟ್ಟಿ, ಚಿಕ್ಕಪ್ಪ ನಾೖಕ್ ರವರ ಪುತ್ರಿ ಲಾವಣ್ಯ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ನಿವೃತ್ತ ಮುಖ್ಯಶಿಕ್ಷಕ ಶ್ರೀಧರ ರೈ, ಎ. ಕೃಷ್ಣ ರೈ ಪುಣ್ಚತ್ತಾರು, ನಿರಂಜನ್ ರೈ, ಮೋಹನ್ ರೈ ನರಿಮೊಗರು, ರಾಮಯ್ಯ ರೈ, ವಿ.ವಿ. ನಾರಾಯಣ ಭಟ್, ನಿತ್ಯಾನಂದ ಶೆಟ್ಟಿ ಮನವಳಿಕೆ, ತಿಮ್ಮಪ್ಪ ರೈ ಸಾಂತ್ಯ, ವಿಜಯ ಕುಮಾರ್ ಹೆಬ್ಬಾರಬೈಲು, ರಮೇಶ್ ರೈ ಡಿಂಬ್ರಿ, ಎ.ಕೆ. ರೈ ಅರಿಯಡ್ಕ, ಗಂಗಾಧರ ರೈ ಅಂಬಾ, ಸುಬ್ಬಯ್ಯ ರೈ ಅರಿಯಡ್ಕ, ಸುಜಿತ್ ರೈ ದರ್ಬೆ, ರಕ್ಷಿತ್ ರೈ ಮುಗೇರು, ಸಾರ್ಥಕ್ ರೈ ಅರಿಯಡ್ಕ, ವಿನೋದ್ ಶೆಟ್ಟಿ ಅರಿಯಡ್ಕ, ಶ್ರೀರಾಮ ಪಕ್ಕಳ ಕರ್ನೂರು, ಜಯಪ್ರಕಾಶ್ ರೈ ನೂಜಿಬೈಲು, ಭವಾನಿಶಂಕರ ಶೆಟ್ಟಿ, ಕೃಷ್ಣಕುಮಾರ್ ರೈ ದೇವಸ್ಯ, ಕೆ.ಸದಾನಂದ, ಚಂದ್ರಹಾಸ ರೈ ತುಂಬೆದಕೋಡಿ, ಅಶ್ವಿನಿ ರೈ, ಅನುಶ್ರೀ, ಮಲ್ಲಿಕಾ ಜೆ. ರೈ, ಕೃಷ್ಣವೇಣಿ ಕೆ., ಸಬಿತಾ ಭಂಡಾರಿ, ನಳಿನಿ ರೈ, ರೂಪರೇಖ ಆಳ್ವ, ಮಹಿತಾ ರೈ, ಸಬಿತಾ ರೈ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.
ಕೋಶಾಧಿಕಾರಿ ನೋಣಾಲು ಜೈರಾಜ್ ಭಂಡಾರಿ ವಂದಿಸಿದರು.