





ಪುತ್ತೂರು:ಪುತ್ತೂರಿನ ಖಾಸಗಿ ವಾಹಿನಿ ಕಹಳೆ ನ್ಯೂಸ್ನ ಪ್ರಧಾನ ಸಂಪಾದಕರಿಗೆ ಮಹಿಳೆಯೊಬ್ಬರು ಕರೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಫೆ.5ರಂದು ನಡೆದಿದೆ.ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗು ಧರ್ಮಸ್ಥಳ ಹೆಗ್ಗಡೆ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಗಿರೀಶ್ ಮಟ್ಟಣ್ಣನವರ್ ಮತ್ತು ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿರ್ಬಂಧ ಆಜ್ಞೆ ನೀಡಿರುವ ಕುರಿತು ಕಹಳೆ ನ್ಯೂಸ್ನಲ್ಲಿ ವರದಿಯಾಗಿತ್ತು.ಇದೇ ವಿಚಾರದಲ್ಲಿ ಫೆ.5ರಂದು ಮಹಿಳೆಯೊಬ್ಬರು ತನಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದಾರೆಂದು ಕಹಳೆ ನ್ಯೂಸ್ನ ಪ್ರಧಾನ ಸಂಪಾದಕ ಶ್ಯಾಮಸುದರ್ಶನ್ ಹೊಸಮೂಲೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿ ಇದೊಂದು ಅಸಂeಯ ಪ್ರಕರಣವಾದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ದೂರುದಾರರಿಗೆ ಹಿಂಬರಹ ನೀಡಿರುವುದಾಗಿ ತಿಳಿದು ಬಂದಿದೆ.














