





ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮ್ ಭಟ್ ಹಸಂತಡ್ಕ ಹಾಗೂ ಮಾಜಿ ವ್ಯವಸ್ಥಾಪಕ ಧನಕೀರ್ತಿ ಶೆಟ್ಟಿ ಯವರ ನಿಧನಕ್ಕೆ ದ.ಕ ಹಾಗೂ ಉಡುಪಿ ಜಿಲ್ಲಾ ಕಸ್ಕಾರ್ಡ್ ಬ್ಯಾಂಕಿನ ನಿರ್ದೇಶಕರೂ ಆಗಿರುವ ಪುತ್ತೂರು ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ರಾಜ್ ಶೇಖರ್ ಜೈನ್ ರವರು ಸಂತಾಪ ಸೂಚಿಸಿದ್ದಾರೆ. ರಾಮ್ ಭಟ್ ಹಸಂತಡ್ಕ ಮತ್ತು ಧನಕೀರ್ತಿ ಶೆಟ್ಟಿ ರವರುಗಳು ಪುತ್ತೂರು ಪಿಎಲ್ ಡಿ ಬ್ಯಾಂಕಿನ ಅಭಿವೃದ್ಧಿ ಯಲ್ಲಿ ಅಹರ್ನಿಶಿಯಾಗಿ ದುಡಿದಿದ್ದಾರೆ. ಅವರ ಸೇವಾ ಕಾರ್ಯ ಬ್ಯಾಂಕಿಗೆ ಹೆಸರನ್ನು ತಂದಿದೆ ಎಂದು ರಾಜ ಶೇಖರ್ ಜೈನ್ ಹೇಳಿದ್ದಾರೆ.










