ವಿಟ್ಲ: ಶಾಲೆಯ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ ನಡೆಯಿತು. ಮೂರು ವಿಭಾಗಳಲ್ಲಿ ನಡೆದ ಸಮಾಲೋಚನೆಯ ಸಂಪನ್ಮೂಲ ವ್ಯಕ್ತಿಗಳು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗೋಪಾಲಕೃಷ್ಣ ನೇರಳಕಟ್ಟೆ, ಬಂಟ್ವಾಳ ಮಕ್ಕಳ ಲೋಕದ ಗೌರವ ಸಲಹೆಗಾರ ಭಾಸ್ಕರ ಅಡ್ವಾಳ ಹಾಗೂ ಶಿಕ್ಷಕರಾದ ಪಿ. ಎಸ್. ಜಯಪ್ರಕಾಶ್ ರವರು ಹೆತ್ತವರ ಜವಾಬ್ಧಾರಿಗಳ ಬಗ್ಗೆ ತಿಳಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್.ಎನ್.ಕೂಡೂರು ರವರು ಶಾಲಾ ವಿದ್ಯಾರ್ಥಿಗಳ ಸಂಸ್ಕಾರ ಮತ್ತು ಭಾಷಾ ನೈಪುಣ್ಯತೆಗಳ ಮತ್ತು ಶೈಕ್ಷಣಿಕ ಚಟುವಟಿಕೆಗಳ ಸಾಧನೆಗಳನ್ನು ನೆನಪಿಸಿ ಪೋಷಕರ ಪ್ರೋತ್ಸಾಹಕ್ಕೆ ಅಭಿನಂದನೆ ಸಲ್ಲಿಸಿದರು. ಶಾಲೆಯ ಪ್ರಾಂಶುಪಾಲರಾದ ಜಯರಾಮ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಕುಕ್ಕಿಲ, ಹಿರಿಯ ನಿರ್ದೇಶಕರಾದ ಮೋನಪ್ಪ ಶೆಟ್ಟಿ, ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಎ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಸಹ ಶಿಕ್ಷಕಿಯರಾದ ರಶ್ಮಿ ಕೆ ಎನ್ , ತೇಜಸ್ವಿನಿ ಹಾಗೂ ಲಾವಣ್ಯ ಪ್ರಾರ್ಥಿಸಿದರು.
ಸಹ ಶಿಕ್ಷಕರಾದ ಗುರುವಪ್ಪ ನಾಯ್ಕ್, ಸಹ ಶಿಕ್ಷಕಿಯರಾದ ಗೀತಾ, ಸಂಧ್ಯಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.