ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆ ಗುತ್ತು ಕುಟುಂಬದ ಮನೆಯಲ್ಲಿ ಗಣಹೋಮ, ಶ್ರೀದುರ್ಗಾಪೂಜೆ, ಶ್ರೀಹರಿಸೇವೆ, ನಾಗತಂಬಿಲ ಮತ್ತು ಶ್ರೀ ಧರ್ಮದೈವ ಧೂಮಾವತೀ ಬಾವನ ಮತ್ತು ರಕ್ತೇಶ್ವರೀ ದೈವಗಳ ನೇಮ ಹಾಗೂ ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ಪೂಜೆ ಶ್ರೀಬ್ರಹ್ಮ ಬೈದೇರುಗಳ ನೇಮೋತ್ಸವ ಫೆ.24 ರಿಂದ ಫೆ.27ರ ತನಕ ನಡೆಯಲಿದೆ. ಫೆ.24 ರಂದು ಬೆಳಿಗ್ಗೆ ಗಣಹೋಮ, ರಾತ್ರಿ ದುರ್ಗಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಫೆ.25ರಂದು ಬೆಳಿಗ್ಗೆ ಶ್ರೀಹರಿ ಸೇವೆ, ನಾಗತಂಬಿಲ ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಸ್ಥಾನದಲ್ಲಿ ಶುದ್ಧಿ ಕಲಶ, ರಾತ್ರಿ ಶ್ರೀಧರ್ಮದೈವ ಧೂಮಾವತೀ ಬಾವನ ರಕ್ತೇಶ್ವರೀ ದೈವಗಳಿಗೆ ಭಂಡಾರ ತೆಗೆದು ಅನ್ನಸಂತರ್ಪಣೆ ಬಳಿಕ ಧರ್ಮದೈವ ಧೂಮವತೀ ಬಾವನ ನೇಮೋತ್ಸವ ನಡೆಯಲಿದೆ. ಫೆ.26ರಂದು ಬೆಳಿಗ್ಗೆ ರಕ್ತೇಶ್ವರೀ, ಶಿರಾಡಿ ದೈವಗಳ ನೇಮ, ಸಂಜೆ ಪಂಜುರ್ಲಿ ಕಲ್ಲುರ್ಟಿ ನೇಮ, ಸತ್ಯದೇವತೆ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಫೆ.27ರಂದು ಬೆಳಿಗ್ಗೆ ದೈಯ್ಯೊಂಕುಳು, ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಇತರ ದೈವಗಳ ನೇಮ, ಸಂಜೆ ಶ್ರೀಬೈದೇರುಗಳ ಭಂಡಾರ ತೆಗೆದು ರಾತ್ರಿ ಶ್ರೀನಾಗಬ್ರಹ್ಮ ಸನ್ನಿಧಿಯಲ್ಲಿ ಪೂಜೆ ಅನ್ನಸಂತರ್ಪಣೆ, ಬಳಿಕ ಶ್ರೀಬೈದೇರುಗಳ ನೇಮೋತ್ಸವ ನಡೆಯಲಿದೆ ಎಂದು ಮನವಳಿಕೆ ಗುತ್ತಿನ ಯಾಜಮಾನ ರಮಾನಾಥ ರೈ, ದೈವ ದೇವರುಗಳ ಟ್ರಸ್ಟ್ನ ಅಧ್ಯಕ್ಷ ಹಾಗು ವ್ಯವಸ್ಥಾಪಕ ದಯಾನಂದ ರೈ, ಕಾರ್ಯದರ್ಶಿ ಪ್ರಶಾಂತ ರೈ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಠಲ ರೈ, ಕಾರ್ಯದರ್ಶಿ ಸುಭಾನು ರೈ, ವ್ಯವಸ್ಥಾಪಕ ಗೋಪಾಲಕೃಷ್ಣ ರೈ, ಗಣೇಶ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.