ಇರ್ದೆ ಪಳ್ಳಿತ್ತಡ್ಕ ಉರೂಸ್‌ಗೆ ಚಾಲನೆ

0

ಪುತ್ತೂರು: ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ ಕೂಟು ಝಿಯಾರತ್ ಮಾಡುವ ಮೂಲಕ ಫೆ.22ರಂದು 48ನೇ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊರಿಂಗಿಲ ಜುಮಾ ಮಸೀದಿಯ ಖತೀಬ್ ಜಿ.ಎಚ್ ಅಯ್ಯೂಬ್ ಅಯ್ಯೂಬ್ ವಹಬಿ ಝಿಯಾರತ್‌ಗೆ ನೇತೃತ್ವ ನೀಡಿದರು.

ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ, ಕಾರ್ಯದರ್ಶಿ ಮೂಸೆಕುಂಞಿ, ಉರೂಸ್ ಕಮಿಟಿ ಅಧ್ಯಕ್ಷ ಶಾಫಿ ಕೇಕನಾಜೆ, ಕಾರ್ಯದರ್ಶಿ ಅಝೀಝ್ ಟಿ.ಎಂ, ಆಲಿಕುಂಞಿ ಕೊರಿಂಗಿಲ, ಶಾಹುಲ್ ಹಮೀದ್ ಕೊರಿಂಗಿಲ, ಮಹಮ್ಮದ್ ಹಾಜಿ ಶಾಲಾಬಳಿ, ಕೊರಿಂಗಿಲ ಮಸೀದಿಯ ಸದರ್ ಮುಅಲ್ಲಿಂ ಮನ್ಸೂರ್ ಅಸ್ಲಮಿ, ಮುಅಲ್ಲಿಂ ಫಾರೂಕ್ ಮುಸ್ಲಿಯಾರ್ ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here