ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆಯು ಫೆ.29 ರಂದು ಬಿರುಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ಜರಗಿತು.
ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ಆದ್ಯಕ್ಷ ಎ.ಜಗಜ್ಜೀವನ್ ದಾಸ್ ರೈರವರು ಸ್ವಾಗತಿಸಿ, ಮಾತನಾಡಿ, ಇತ್ತೀಚಿಗೆ ನಡೆದ ಬಿರುಮಲೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಇದರ ಹಿಂದೆ ಸರ್ವರ ಸಹಕಾರವಿದ್ದು ಕೃತಜ್ಞತೆಗಳು. ಶಾಸಕ ಅಶೋಕ್ ಕುಮಾರ್ ರೈಯವರು ಬಿರುಮಲೆ ಅಭಿವೃದ್ಧಿಗಾಗಿ ರೂ.2.50 ಕೋಟಿ ಹಣವನ್ನು ಸರಕಾರದಿಂದ ಬಿಡುಗಡೆಗೊಳಿಸಿರುವುದಕ್ಕೆ ವಿಶೇಷ ಶ್ಲಾಘನೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲೂ ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸುವಂತಾಗಬೇಕು ಎಂದು ಹೇಳಿ ಸಭೆಯ ಉದ್ಧೇಶಗಳ ಬಗ್ಗೆ ಮಾತನಾಡಿದರು.
ಬಿರುಮಲೆ ಬೆಟ್ಡ ಅಭಿವೃದ್ಧಿ ಯೋಜನಾ ಸಮಿತಿಯ ಕಾರ್ಯದರ್ಶಿ ಎಂ.ಎಸ್ ಅಮ್ಮಣ್ಣಾಯರವರು ವರದಿ ಮಂಡಿಸಿದರು. ಸದಸ್ಯ ನಿತಿನ್ ಪಕ್ಕಳ ವಂದಿಸಿದರು. ಸಭೆಯಲ್ಲಿ ದತ್ತಾತ್ರೇಯ ರಾವ್, ಸಂತೋಷ್ ಶೆಟ್ಟಿ, ನೂಜಿಬೈಲು ಜಯಪ್ರಕಾಶ್ ರೈ, ಶಾಂತಕುಮಾರ್, ಡಾ.ಸತ್ಯವತಿ ಆಳ್ವ, ಮನೋಜ್ ಶಾಸ್ತ್ರಿ ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನವಾಗಿ ಅಭಿವೃದ್ಧಿಗೊಂಡ ಮಂಟಪಕ್ಕೆ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಬಿರುಮಲೆ ಅಭಿವೃದ್ಧಿ ಯೋಜನೆಗೆ ನೂತನ ಆಫೀಸ್ ವ್ಯವಸ್ಥೆ ಮುಂತಾದುವುಗಳ ಮರು ಜೋಡಣೆಗೊಳಿಸುವ ಕುರಿತಾಗಿ ಚಿಂತನ-ಮಂಥನಗಳು ಸಭೆಯಲ್ಲಿ ನಡೆದವು.