ಬಡಗನ್ನೂರು: ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ಶಬರಿನಗರ ಸುಳ್ಯಪದವು ಇದರ ವಾರ್ಷಿಕ ಶ್ರೀ ದೈವಗಳ ನೇಮೋತ್ಸವವು ಮಾ.10 ಮತ್ತು 11ರಂದು ಶ್ರೀ ಕ್ಷೇತ್ರದ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಭಕ್ತಾಧಿಗಳು ಈ ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ. ಮರದಮೂಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.10ರಂದು ಬೆಳಗ್ಗೆ ಗಂ.7ರಿಂದ ಗಣಪತಿ ಹೋಮ, 8 ರಿಂದ ಭಜನಾ ಕಾರ್ಯಕ್ರಮವು ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ ಶಬರಿನಗರ ಸುಳ್ಯಪದವು, ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ಸುಳ್ಯಪದವು, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಸುಳ್ಯಪದವು, ಶ್ರೀ ಮಹಾವಿಷ್ಣು ಭಜನಾ ಸಂಘ ಸುಳ್ಯಪದವು, ಶ್ರೀ ಅಯ್ಯಪ್ಪ ಭಜನಾ ಮಂದಿರ ಸುಳ್ಯಪದವು ತಂಡದ ಸದಸ್ಯರಿಂದ ನಡೆಯಲಿದೆ.
ಮಧ್ಯಾಹ್ನ 1 ಗಂಟೆಯಿಂದ ಸರ್ವೋದಯ ವಿದ್ಯಾಸಂಸ್ಥೆ ಸುಳ್ಯಪದವು ವಿದ್ಯಾರ್ಥಿನಿಗಳಿಂದ ಮತ್ತು ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ಮಂಡಳಿ ಕನ್ನಡ ಹಾಗೂ ಶ್ರೀ ಅಂಬಾಭವಾನಿ ಭಜನಾ ಮಂಡಳಿ ಪಾದೆಗದ್ದೆ ಇವರಿಂದ ಕುಣಿತ ಭಜನಾ ಕಾರ್ಯಕ್ರಮವು ನಡೆಯಲಿದೆ. ಬಳಿಕ ಮಧ್ಯಾಹ್ನ 1.15 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂ 4.30ಯಿಂದ ಗುಳಿಗ ದೈವದ ನೇಮೋತ್ಸವ, ರಾತ್ರಿ ಗಂ.8 ಕ್ಕೆ ಶ್ರೀ ದೈವದ ಭಂಡಾರ ತೆಗೆಯುವುದು, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂ 11-00ರಿಂದ ಶ್ರೀ ಕೊರಗ ತನಿಯ ದೈವದ ನೇಮೋತ್ಸವ ನಡೆಯಲಿದೆ.
ಮಾ.11ರಂದು ಪ್ರಾತಃಕಾಲ ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7.30 ರಿಂದ ಸ್ವಾಮಿ ಕೊರಗಜ್ಜ ಬಾಲ ಯಕ್ಷಗಾನ ಸಂಘ ಶಬರಿನಗರ ಸುಳ್ಯಪದವು ಇವರಿಂದ ಶ್ರೀದೇವಿ ಲೀಲಾಮೃತಂ ಯಕ್ಷಗಾನ ಬಯಲಾಟ ನಡೆಯಲಿದೆ.
ಗೌರವಾರ್ಪಣೆ
ವಾರ್ಷಿಕ ನೇಮೋತ್ಸವ ಅಂಗವಾಗಿ ಡಾ. ದಾಮೋದರ ಪೂಜಾರಿ ಮರದಮೂಲೆ (ಯು.ಎಸ್.ಎ.), ಸತೀಶ್ ಮರದಮೂಲೆ (ಇಸ್ರೋ ಬೆಂಗಳೂರು), ಅಣ್ಣು ನಾಯ್ಕ (ಕೆ.ಎಸ್.ಆರ್.ಟಿ.ಸಿ. ಚಾಲಕರು) ನೆಲ್ಯಾಡಿ, ಸಾಂತಪ್ಪ ಪೂಜಾರಿ ಕಡಮಗದ್ದೆ ಕಾಯರ್ಪದವು (ಕೆ.ಎಸ್.ಆರ್.ಟಿ.ಪಿ. ಟಿ.ಸಿ)ಇವರಿಗೆ ಗೌರವಾರ್ಪಣೆ ನಡೆಯಲಿದೆ.