ಪುತ್ತೂರು: ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಫಲಕಗಳನ್ನು ಚುನಾವಣಾ ಇಲಾಖಾ ಸಿಬ್ಬಂದಿಗಳು ತೆರವುಗೊಳಿಸಲಾಗುತ್ತಿದ್ದು, ಮುಕ್ರಂಪಾಡಿಯಲ್ಲಿರುವ ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿ ಮುಂದಿದ್ದ ಪುತ್ತಿಲ ಪರಿವಾರದ ವೃತ್ತಾಕಾರದ ಫಲಕ ತೆರವು ಮಾಡಿ ಬರಹದ ಫಲಕಕ್ಕೆ ತೇಪೆ ಹಚ್ಚಲಾಗಿದೆ.
ಪುತ್ತಿಲ ಪರಿವಾರ ರಾಜಕೀಯ ಪಕ್ಷವಾಗದಿದ್ದರೂ ವಿಧಾನಸಭಾ ಚುನಾವಣೆಯ ಸಂದರ್ಭ ಸ್ವತಂತ್ರ ಅಭ್ಯರ್ಥಿಯಾಗಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡು ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಸಂದರ್ಭ ಪುತ್ತಿಲ ಪರಿವಾರ ನಾಮಫಲಕ ತೆರವು ಮಾಡಲಾಗಿದೆ ಎಂದು ತಿಳಿದು ಬಂದಿದೆ.