ರಾಮಕುಂಜ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೆಯ ಮಾ.31ರಂದು ನಡೆದ ದರ್ಶನ ಬಲಿ ಉತ್ಸವದ ಸಂದರ್ಭದಲ್ಲಿ ತವರು ಲಕ್ಷ್ಮೀಯರಿಗೆ ಗೌರವಾರ್ಪಣೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.
ಜಾತ್ರೋತ್ಸವದಲ್ಲಿ ಭಾಗಿಯಾದ ಕೊಯಿಲ ಗ್ರಾಮದಿಂದ ಮದುವೆಯಾಗಿ ತೆರಳಿರುವ ಹೆಣ್ಣುಮಕ್ಕಳಿಗೆ ಗೌರವಾರ್ಪಣೆ ನಡೆಯಿತು. ಸ್ವಾಭಿಮಾನದ ಕಲ್ಯಾಣ ಮಂಟಪದಲ್ಲಿ ಆಗಮಿಸಿರುವ ಎಲ್ಲಾ ತವರು ಲಕ್ಷ್ಮೀಯರನ್ನು ಕುಳ್ಳಿರಿಸಿ ಆರತಿ ಎತ್ತಿ ತಿಲಕವಿಟ್ಟು ಸ್ವಾಗತಿಸಿಲಾಯಿತು. ಬಳಿಕ ಹೂ, ಬಲೆ, ರವಿಕೆ, ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ತವರುಲಕ್ಷ್ಮೀಯರು ಅಭಿಪ್ರಾಯ ಹಂಚಿಕೊಂಡರು. ಗ್ರಾಮದಿಂದ ಮದುವೆಯಾಗಿ ತೆರಳಿರುವ ಹೆಣ್ಣುಮಕ್ಕಳು ದೇವಸ್ಥಾನ ಜೊತೆಗಿನ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉತ್ಸವ ಸಮಿತಿಯ ಯೋಜಿತ ಈ ಕಾರ್ಯಕ್ರಮ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ಪರಮೇಶ್ವರ ಸಬಳೂರು, ರಾಮಚಂದ್ರ ನಾಯ್ಕ ಏಣಿತ್ತಡ್ಕ, ಭವಾನಿಶಂಕರ್ ಪರಂಗಾಜೆ, ಸುಧೀಶ್ ಪಟ್ಟೆ, ಭವಿತ್ ರಾಜ್ ಪಲ್ಲಡ್ಕ, ನಿತಿನ್ ಪಲ್ಲಡ್ಕ, ದಿವ್ಯಾ ಚೇತನ್ ಆನೆಗುಂಡಿ, ಸುಶೀಲ ಓಕೆ, ಲಲಿತಾ ಕೊಯಿಲ ಮೊದಲಾದವರು ಯಶಸ್ವಿಗೊಳಿಸಿದರು.