ಪುತ್ತೂರಿನಲ್ಲಿ ‘ಗಬ್ಬರ್ ಸಿಂಗ್’ ತೆರೆಗೆ-ಕರಾವಳಿಯಾದ್ಯಂತ ಪ್ರದರ್ಶನ

0

ಪುತ್ತೂರು:ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಸಿದ್ಧವಾಗಿರುವ ‘ಗಬ್ಬರ್ ಸಿಂಗ್’ ತುಳು ಚಲನ ಚಿತ್ರವು ಮೇ.3ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಂಡಿದ್ದು ಪುತ್ತೂರಿನಲ್ಲಿ ಜಿಎಲ್‌ಒನ್ ಮಾಲ್‌ನ ಭಾರತ್ ಸಿನಿಮಾದಲ್ಲಿ ಗಣ್ಯರು ಮತ್ತು ಕಲಾವಿದರ ಸಮ್ಮುಖದಲ್ಲಿ ತೆರೆ ಕಂಡಿತು.


ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಆರ್ಯಾಪು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ಉದ್ಯಮಿ ಮತ್ತು ಕಲಾವಿದರಾದ ದಯಾನಂದ ರೈ, ಯುವ ಪ್ರತಿಭೆ ದೀಕ್ಷಾ ರೈ ಅವರು ಮಾತನಾಡಿ ತುಳು ಚಿತ್ರರಂಗದಲ್ಲಿ ದುಡಿದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತೊಮ್ಮೆ ತೆರೆಯ ಮೇಲೆ ಕಾಣಬೇಕು.ಅವರಿಗೆ ಇನ್ನಷ್ಟು ಹುಮ್ಮಸ್ಸು ಸಿಗುವಂತೆ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲೇ ವೀಕ್ಷಣೆ ಮಾಡುವಂತೆ ಮನವಿ ಮಾಡಿದರು.ಚಿತ್ರದ ನಟರಾದ ಚಂದ್ರಹಾಸ ಶೆಟ್ಟಿ ಮಾಣಿ, ಉಮೇಶ್ ಮಿಜಾರು ಮತ್ತು ರವಿ ರಾಮಕುಂಜ ಅವರು ಮಾತನಾಡಿ ಪ್ರೇಕ್ಷಕರ ಪ್ರೋತ್ಸಾಹ ಯಾಚಿಸಿದರು.ಭಾರತ್ ಸಿನೆಮಾಸ್ ಮ್ಯಾನೇಜರ್ ಜಯರಾಮ ವಿಟ್ಲ, ಚಿತ್ರದ ವಿತರಕ ಕುಕ್ಕಾಡಿ ಬಾಲಕೃಷ್ಣ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು. ಪದ್ಮರಾಜ್ ಅವರು ಕಾರ್ಯಕ್ರಮ ನಿರೂಪಿಸಿದರು.

ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಆಧಾರಿತ ಚಿತ್ರ
ಸತೀಶ್ ಪೂಜಾರಿ ಬಾರ್ಕೂರ್ ಅವರ ನಿರ್ಮಾಪಕತ್ವದಲ್ಲಿ ಮೂಡಿ ಬಂದ ‘ಗಬ್ಬರ್ ಸಿಂಗ್’ ವಿಭಿನ್ನ ಕಥೆ ಒಳಗೊಂಡಿದ್ದು,ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ.ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫ್ಲಾಟ್ ದೃಶ್ಯಗಳು ಇವೆ.ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ.ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.ಚಿತ್ರದ ಪ್ರದರ್ಶನದ ನಡುವೆ ಆಗಮಿಸಿದ ಚಿತ್ರದ ನಾಯಕ ನಟ ಶರಣ್ ಶೆಟ್ಟಿಯವರು ಪ್ರೇಕ್ಷಕರ ಆಶೀರ್ವಾದ ಪಡೆದರು.

LEAVE A REPLY

Please enter your comment!
Please enter your name here