ಇಂದು ಫಿಲೋಮಿನಾ ಕಾಲೇಜಿನಲ್ಲಿ ಎಸ್.ಪಿ.ಎಲ್ 2024 ಲೀಗ್ ಕ್ರಿಕೆಟ್ ಸಮರ

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ 10 ತಂಡಗಳ ನಡುವಿನ ‘ಫಿಲೋಮಿನಾ ಕ್ರಿಕೆಟ್ ಲೀಗ್(ಎಸ್.ಪಿ.ಎಲ್)-2024’ ಮೇ 18 ರಂದು ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಒಟ್ಟು ಹತ್ತು ತಂಡಗಳು ಭಾಗವಹಿಸುತ್ತಿದ್ದು ತಂಡಗಳನ್ನು  ‘ಎ’ ಹಾಗೂ ‘ಬಿ’ ವಿಭಾಗಗಳನ್ನಾಗಿ ಮಾಡಿ ಲೀಗ್ ಮಾದರಿಯಲ್ಲಿ ಆಡಿಸಲಾಗುತ್ತದೆ. ‘ಎ’ ವಿಭಾಗದಲ್ಲಿ ಟೀಮ್ ಝೇವಿಯನ್ಸ್, ಟೀಮ್ ಆಗಸ್ತ್ಯ, ಎಕ್ಸ್ ಕ್ಲಸರ್ಸ್, ಸಹಾಯಕ ಪ್ರಾಧ್ಯಾಪಕರ ತಂಡ, ಟೀಮ್ ಸ್ಕ್ವಾಡ್ರನ್, ‘ಬಿ’ ವಿಭಾಗದಲ್ಲಿ ಟೀಮ್ ಟಿ.ಎಕ್ಸ್.ಎಂ, ಅಗ್ನಿ ಬ್ರದರ್ಸ್, ಬಿಎಸ್ಸಿ ಮೊಂಕ್ಸ್ ಯುನೈಟೆಡ್, ಫಿಲೋ ಹಾಕ್ಸ್, ಟೀಮ್ ಮೇವರಿಕ್ಸ್ ತಂಡಗಳು ಸೆಣಸಾಡಲಿವೆ. 

ಪ್ರತಿಷ್ಠಿತ ಪಂದ್ಯಾವಳಿ ಐಪಿಎಲ್ ಪಂದ್ಯಾವಳಿಯಂತೆ ನಡೆಯಲಿದ್ದು ಪ್ರತಿ ತಂಡಗಳು ಮಾಲಕರನ್ನು ಹೊಂದಿದೆ. ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೊರವರು ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕಾಲೇಜು ಹಿರಿಯ ವಿದ್ಯಾರ್ಥಿ ಹಾಗೂ ಸುಳ್ಯ ಎಸಿಎಫ್ ಆಗಿರುವ ಪ್ರವೀಣ್ ಶೆಟ್ಟಿ, ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಭಾಗವಹಿಸಲಿದ್ದಾರೆ ಎಂದು ಕಾಲೇಜು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊ, ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಪಿನ್ ಎಚ್.ಜಿ, ಕಾರ್ಯದರ್ಶಿ ಸಮೃದ್ಧಿ ಶೆಣೈ, ಜೊತೆ ಕಾರ್ಯದರ್ಶಿ ರಕ್ಷಾ ಪಿ.ಬಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here