ಪುತ್ತೂರು: ವರ್ಣಿಕಾ ಡ್ರಾಯಿಂಗ್ ಸ್ಕೂಲ್ ಕುಂಬ್ರ ಮತ್ತು ಶ್ರೀ ಶಾರದಾ ಕಲಾ ಶಾಲೆ ಕುಂಬ್ರ ಇದರ ಸಹಯೋಗದಲ್ಲಿ ಚಿತ್ರ ಚಿತ್ತಾರ ಬೇಸಿಗೆ ಶಿಬಿರವು ಮೇ.13ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.
ಆರು ದಿನಗಳ ಕಾಲ ನಡೆದ ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ನ ಅಧ್ಯಕ್ಷೆ ತ್ರಿವೇಣಿ.ಕೆ ಶಿಬಿರವನ್ನು ಉದ್ಘಾಟಿಸಿ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದೊಂದು ಉತ್ತಮ ಅವಕಾಶ ಈ ಶಿಬಿರವನ್ನು ಇನ್ನಷ್ಟು ಪ್ರಚಾರಗೊಳಿಸಿ ಹೆಚ್ಚಿನ ಮಕ್ಕಳು ಶಿಬಿರದ ಸದುಪಯೋಗಪಡಿಸಬೇಕೆಂದು ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಂಬ್ರ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಭಿನಯ ಗೀತೆ ಮತ್ತು ಕೌಶಲ್ಯಾಧಾರಿತ ಆಟಗಳು ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ ಇಲ್ಲಿಯ ಸಹ ಶಿಕ್ಷಕಿ ಭವ್ಯ ವೇಣುಗೋಪಾಲ್ ತರಗತಿ ನಿರ್ವಹಿಸಿದರು. ಶಿಬಿರ ಸಂಯೋಜಕ ರಂಜಿತ್ ಹಾಗೂ ದೀಪ್ತಿ ಉಪಸ್ಥಿತರಿದ್ದರು. ಶಾಸ್ತ ರೈ ಕಾರ್ಯಕ್ರಮ ನಿರೂಪಿಸಿದರು.