ಪುತ್ತೂರು: ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಅಕಾಡೆಮಿ, ಪುತ್ತೂರು ರೋಟರಿ ಕ್ಲಬ್ ಬಿರಮಲೆ ಹಿಲ್ಸ್ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಂಯುಕ್ತ ಆಶ್ರಯದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆದ ಉಚಿತ ಬೇಸಿಗೆ ವಾಲಿಬಾಲ್ ತರಬೇತಿ ಶಿಬಿರದ ಸಮಾರೋಪ ಸಮರಂಭವು ಮೇ.21ರಂದು ನಡೆಯಲಿದೆ ಎಂದು ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆಮ್ಮಿಂಜೆ ತಿಳಿಸಿದರು.
ಮೇ.20ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಮಿತ್ರವೃಂದ ವಾಲಿಬಾಲ್ ಅಕಾಡೆಮಿಯು ನೂರಾರು ಮಂದಿಗೆ ಉಚಿತ ತರಬೇತಿಗಳನ್ನು ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ತರಬೇತಿ ನೀಡಿ ಬೆಳೆಸಿದೆ. ಗ್ರಾಮೀಣ ಹಾಗೂ ತಾಲೂಕು ಮಟ್ಟದ ಯುವಕರಿಗೆ ಉತ್ತಮ ತರಬೇತಿ ನೀಡಿ ಜಿಲ್ಲೆ, ರಾಜ್ಯ, ರಾಷ್ಟಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶ ತರಬೇತಿ ನೀಡಲಾಗಿದೆ. ಈ ಬಾರಿ ತಿಂಗಳ ಕಾಲ ಸುಮಾರು 60 ಮಂದಿ ಶಾಸ್ತ್ರೀಯ ವಾಲಿಬಾಲ್ ಪಟ್ಟುಗಳನ್ನು ಶಿಬಿರದ ಮೂಲಕ ಕಲಿತಿದ್ದಾರೆ ಎಂದರು.
ಲೀಗ್ ಪಂದ್ಯಾಟ:
ಇದೇ ದಿನ ಬೆಳಿಗ್ಗೆ 7 ಗಂಟೆಗೆ ಮಿತ್ರವೃಂದ ವಾಲಿಬಾಲ್ ಲೀಗ್ ಟೂರ್ನಮೆಂಟ್ ಆರಂಭಗೊಳ್ಳಲಿದೆ. ಮಿತ್ರವೃಂದ ಅಕಾಡೆಮಿಯ ಅಧ್ಯಕ್ಷ ಪಿ.ವಿ. ಕೃಷ್ಣನ್ ಅಧ್ಯಕ್ಷತೆ ವಹಿಸಲಿದ್ದು, ಪುತ್ತೂರು ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಉದ್ಘಾಟಿಸಲಿದ್ದಾರೆ. ಪುತ್ತೂರು ನಗರ ಇನ್ಸೆಪೆಕ್ಟರ್ ಸತೀಶ್ ಕುಮಾರ್ ಕ್ರೀಡಾಂಗಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಯುವ ಸಬಳೀಕರಣ ಹಾಗೂ ಕ್ರೀಡಾ ಇಲಾಖೆ ಸಂಯೋಜಕ ಶ್ರೀಕಾಂತ್ ಪೂಜಾರಿ ಬಿರಾವು, ನಗರಸಭಾ ಸದಸ್ಯ ರಿಯಾಝ್, ಉದ್ಯಮಿ ಅಬ್ದುಲ್ ರಶೀದ್, ಫಾರೂಕ್ ಪುತ್ತೂರು ಭಾಗವಹಿಸಲಿದ್ದಾರೆ.
ಸಂಜೆ ಸಮಾರೋಪ:
ಸಂಜೆ ಸಮಾರೋಪದಲ್ಲಿ ರೋಟರಿ ಕ್ಲಬ್ ಬೀರಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಅಶೋಕ್ ರೈ ಉದ್ಘಾಟನೆ ನೆರವೇರಿಸಲಿದ್ದಾರೆ. ಅಕಾಡೆಮಿಯ ಪ್ರೋತ್ಸಾಹಕರಾದ ರಕ್ಷಾ ಎಸ್.ಆರ್. ಸಮವಸ್ತ್ರ ವಿತರಿಸಲಿದ್ದಾರೆ. ಯುವ ಸಬಳೀಕರಣ ಇಲಾಖೆ ಜಿಲ್ಲಾ ನಿರ್ದೇಶಕ ಪ್ರದೀಪ್ ಡಿಸೋಜ, ಉದ್ಯಮಿಗಳಾದ ಜಿ.ಎಲ್. ಬಲರಾಮ ಆಚಾರ್ಯ, ಕೃಷ್ಣ ನಾರಾಯಣ ಮುಳಿಯ, ಸತ್ಯಶಂಕರ್, ಜಯಂತ ನಡುಬೈಲು, ಎನ್. ಶಿವಪ್ರಸಾದ್ ಶೆಟ್ಟಿ, ಮಾಜಿ ಪುರಸಭಾಪತಿ ರಾಜೇಶ್ ಬನ್ನೂರು, ವೈದ್ಯ ಡಾ. ಪ್ರದೀಪ್ ಕುಮಾರ್, ಲಿಟ್ಲಫ್ಲವರ್ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ, ಮಿತ್ರವೃಂದ ಅಕಾಡೆಮಿಯ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಮೂಲಕ ಮೊಟ್ಟೆತ್ತಡ್ಕದಲ್ಲಿ ಸುಮಾರು ೬೬ ಸೆಂಟ್ಸ್ ಜಾಗವನ್ನು ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸುಸಜ್ಜಿತ ಮಲ್ಟಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ರೂ. 1.50 ಕೋಟಿಯ ರೂಪಿಸಲಾಗಿದೆ ಎಂದು ಬಾಲಚಂದ್ರ ಮಾಹಿತಿ ನೀಡಿದರು.
ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಅಧ್ಯಕ್ಷ ಪಿ.ವಿ.ಕೃಷ್ಣನ್, ಸದಸ್ಯ ಪ್ರಸನ್ನ ಕುಮಾರ್, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮುಖ್ಯ ತರಬೇತುದಾರ ಪಿ.ವಿ.ನಾರಾಯಣನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.