ಪುತ್ತೂರು: ಬೊಳುವಾರು ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದಲ್ಲಿ ‘ಮಧುರ ಯೋಗ ತರಬೇತಿ ಕೇಂದ್ರ ಮೇ.20ರಂದು ಶುಭಾರಂಭಗೊಂಡಿತು.
ಯೋಗ ತರಬೇತಿ ಕೇಂದ್ರವನ್ನು ಉದ್ಘಾಟಿಸಿದ ಕಲ್ಲಮ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಕಲ್ಲಮ ಮಾತನಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.
ಅತಿಥಿಯಾಗಿದ್ದ ರಾಘವೇಂದ್ರ ಭಟ್ ಮಾತನಾಡಿ ಯೋಗಾಭ್ಯಾಸದೊಂದಿಗೆ ನಮ್ಮ ಕರ್ತವ್ಯಗಳನ್ನು ಸುಲಲಿತವಾಗಿ ಮಾಡುವುದು ಹೇಗೆ ಎಂಬ ಕೌಶಲ್ಯವನ್ನು ಈ ಯೋಗ ತರಗತಿಯಿಂದ ಕಲಿಯುವಂತಾಗಲಿ ಎಂದು ಹಾರೈಸಿದರು.
ಯೋಗ ನಿರ್ದೇಶಕಿ ಮಧು ಜಿ.ಸಿ ಮಾತನಾಡಿ ನಮ್ಮ ದೇಹ ಮತ್ತು ಮನಸ್ಸುಗಳನ್ನು ಯೋಗಾಭ್ಯಾಸದೊಂದಿಗೆ ಹೇಗೆ ಸಮಸ್ಥಿತಿಯಲ್ಲಿ ಇರಿಸಿಕೊಳ್ಳಬಹುದು ಮತ್ತು ಯೋಗದಿಂದ ನೆಮ್ಮದಿಯ ಜೀವನವನ್ನು ಹೇಗೆ ಕಂಡುಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸದಸ್ಯ ಕಮಲೇಶ್ ಎಸ್.ವಿ ಅವರು ಯೋಗಾಸಕ್ತರಿಗೆ ಮಧುರ ಯೋಗ ತರಬೇತಿ ಕೇಂದ್ರದಲ್ಲಿ ಉತ್ತಮ ತರಬೇತಿ ಸಿಗಲಿದೆ ಎಂದು ಹೇಳಿ ಶುಭ ಹಾರೈಸಿದರು.
ಸಂಸ್ಥೆಯ ಸದಸ್ಯರಾದ ಡಾ.ವಿದೂಷಿ ಶೋಭಿತಾ ಸತೀಶ್ ಹಾಗೂ ಸುರೇಶ್ ಎಸ್.ಡಿ ಶುಭ ಹಾರೈಸಿದರು. ಡಾ.ಸತೀಶ್ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸಂಚಾಲಕರಾದ ಶ್ರೀನಿವಾಸ್ ಯಚ್.ಬಿ ಸ್ವಾಗತಿಸಿದರು. ಜಯಶ್ರೀ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.
ಮೇ.20ರಿಂದ ಪ್ರತೀ ದಿನ ಯೋಗ, ಪ್ರಾಣಾಯಾಮ, ಧ್ಯಾನ ತರಬೇತಿ ನೀಡಲಾಗುವುದು ಹಾಗೂ ಆನ್ಲೈನ್ ತರಗತಿಗಳನ್ನೂ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊ:7760633177 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.