ಪೆರಾಬೆ: ನೂರುಲ್ ಹುದಾ ಮದ್ರಸ ಕೋಚಕಟ್ಟೆ ಇದರ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಮೇ.27ರಂದು ರಾತ್ರಿ ಕುಂತೂರು ಮುದರ್ರಿಸ್ ಹಾಜಿ ಮೊಯಿದು ಫೈಝಿ ಉಸ್ತಾದರ ನೇತೃತ್ವದಲ್ಲಿ ಮದ್ರಸ ಹಾಲ್‌ನಲ್ಲಿ ನಡೆಯಿತು.
ಮದ್ರಸ ಸದರ್ ಉಸ್ತಾದರಾದ ಫಾರೂಕ್ ದಾರಿಮಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಂತರ 2024-25ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಹಮೀದ್ ಅಜ್ಮೀರ್ ಶರೀಫ್, ಉಪಾಧ್ಯಕ್ಷರಾಗಿ ಅಬ್ಬಾಸ್ ಕೆಎಸ್‌ಆರ್‌ಟಿಸಿ, ಪಿ.ಎ.ಅಬ್ದುಲ್ಲಾ ಅಲ್ ಕೌಸರ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಅಲ್‌ಅಮೀನ್ 2ನೇ ಬಾರಿಗೆ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಝೆಡ್‌ಬಿ, ಉಮ್ಮರ್ ಪೊಸೊಳಿಗೆ,ಕೋಶಾಧಿಕಾರಿ ಯಾಗಿ ಅಮಾನ್ ಕೋಚಕಟ್ಟೆ, ಸದಸ್ಯರಾಗಿ ಅಬೂಬಕ್ಕರ್ ಡಿ.ಎಸ್., ಇಬ್ರಾಹಿಂ ಹೊಸಮನೆ, ಅಶ್ರಫ್ ಎಂ.ಕೆ., ರಮ್ಲ ಕೆ., ಹನೀಫ್ ಯಂ., ಹಸೈನಾರ್ ಕೆ., ಆದಂ ಸಾಹೇಬ್, ಲತೀಫ್ ಮಕ್ಬೂಲ್, ಅಝೀಝ್ ಕೆ.ಪಿ., ಹಂಝ ಹೊಸಮನೆ, ಝಕಾರಿಯಾ ಕಳಾರ, ಬಶೀರ್ ಕೆ.ಪಿ., ಅನ್ಸಾರ್ ಪಟ್ಟೆ, ನೌಷಾದ್ ಕಟ್ಲೇರಿ, ಯೂಸುಫ್ ಚಾಮೆತ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಸನ್ಮಾನ:
ಮೂರು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಪವಿತ್ರ ಉಮ್ರಾ ಯಾತ್ರೆ ಕೈಗೊಂಡ ಬಶೀರ್ ಕೆ.ಪಿ.ಅವರನ್ನು ಆಡಳಿತ ಸಮಿತಿ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಪುತ್ತಿಗೆ ಖತೀಬರಾದ ಹನೀಫ್ ದಾರಿಮಿ ಅವರು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ನೂತನ ಉಪಾಧ್ಯಕ್ಷ ಅಬ್ಬಾಸ್ ಕೆಎಸ್‌ಆರ್‌ಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.