ಪುಣಚ: ಸುಮಾರು 100 ವರ್ಷಗಳ ಮೇಲ್ಪಟ್ಟ ಇತಿಹಾಸ ಇರುವ ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಸೌಲಭ್ಯಗಳ ವಿತರಣಾ ಸಮಾರಂಭ ಮೇ.31ರಂದು ನಡೆಯಿತು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ ಸುಮಾರು ನೂರು ವರ್ಷಗಳ ಮೇಲ್ಪಟ್ಟ ಇತಿಹಾಸವಿರುವ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಮ್ಮೆಲ್ಲರ ಸಹಕಾರ ಅತೀ ಮುಖ್ಯ. ಉತ್ತಮ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನ-ಮಾನ ಗಳಿಸುವಂತಾಗಲಿ. ಪೋಷಕರ ಸಹಕಾರ ಸದಾ ಇರಲಿ ಎಂದರು.
ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟ್ಟಿಕಲ್ಲು ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಹಳೆ ವಿದ್ಯಾರ್ಥಿಗಳಾದ ವಿಶ್ವನಾಥ ರೈ ಕೋಡಂದೂರು, ಅಲ್ಬರ್ಟ್ ಡಿ’ಸೊಜಾ ಮಲೆತ್ತಡ್ಕ, ಯುವ ವಕೀಲ ರವಿ ಕಾನ ಮಾತನಾಡಿ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆ ಯಶಸ್ವಿ ಕಾಣಲಿ ಎಂದು ಶುಭ ಹಾರೈಸಿದರು. ಮೌರಿಸ್ ಡಿ’ಸೋಜಾ, ಮನೋಜ್ ಕುಮಾರ್ ಹಾಗೂ ಗ್ರಾ.ಪಂ.ಸದಸ್ಯೆ ಗಿರಿಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಊರ ಪರ-ಊರ ಸದೃದಯಿ ದಾನಿಗಳ ಆರ್ಥಿಕ ಸಹಕಾರದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ಉಚಿತ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲಾ ನಿವೃತ್ತ ಮುಖ್ಯಗುರು ಹರ್ಷ ಶಾಸ್ತ್ರಿ ಮಣಿಲ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.